ಕ್ರೀಡೆ

ವಿರಾಟ್​ ಮತ್ತು ರೋಹಿತ್​ ಈ ಕೆಲಸ ಮಾಡಿಯೇ ನೀವು ನಿವೃತ್ತಿ ತೆಗೆದುಕೊಳ್ಳಿ: ಕ್ರಿಕೆಟ್ ದಿಗ್ಗಜರಿಗೆ ಅಕ್ಮಲ್ ಸಲಹೆ

ಲಾಹೋರ್​: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಿ ಎಂದು ಪಿಸಿಬಿ ಈ ಹಿಂದೆಯೇ ಬಿಸಿಸಿಐಗೆ ಒತ್ತಾಯಿಸಿತ್ತು. ಆದ್ರೆ, ಇದಕ್ಕೆ ಕಿಂಚಿತ್ತು ಆಸ್ಪದ ನೀಡದ ಭಾರತೀಯ ಕ್ರಿಕೆಟ್ ಮಂಡಳಿ, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಪಾಕ್​ಗೆ ಬರೋದಿಲ್ಲ ಎಂದು ಖಡಕ್ ಆಗಿ ತಿಳಿಸಿತ್ತು. ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಮೆನ್​ ಇನ್​ ಬ್ಲ್ಯೂ ಪಡೆಯನ್ನು ಲಾಹೋರ್​ಗೆ ಕರೆತರುವ ಪಾಕ್​ನ ಎಲ್ಲಾ ಪ್ರಯತ್ನವೂ ಸದ್ಯ ವಿಫಲವಾಗಿದೆ. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಪಾಕ್​ನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್​ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಗೆ ಸಲಹೆಯೊಂದನ್ನು ನೀಡಿದ್ದಾರೆ.

ಪ್ರಸ್ತುತ ಟಿ20 ಫಾರ್ಮೆಟ್​ನಿಂದ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಮುಂಬರುವ ಟೆಸ್ಟ್​ ಮತ್ತು ಏಕದಿನ ಪಂದ್ಯಗಳನ್ನು ಆಡಲಿರುವುದು ಖಚಿತವಾಗಿದೆ. ಇನ್ನು ಈ ಮಧ್ಯೆ ಟೀಮ್ ಇಂಡಿಯಾ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅಕ್ಮಲ್​, "ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆಯುವ ಮುನ್ನ ನೀವಿಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಬೇಕು. ಇಲ್ಲಿನ ಮೈದಾನದಲ್ಲಿ ಕೊಹ್ಲಿ ಮತ್ತು ವಿರಾಟ್​ ಅವರ ಬ್ಯಾಟಿಂಗ್ ವೈಖರಿಯನ್ನು ನಾವು ಕಣ್ತುಂಬಿಕೊಳ್ಳುವ ಬಯಕೆಯಿದೆ ಎಂದು ಕಮ್ರಾನ್ ಹೇಳಿದ್ದಾರೆ.

ನಿವೃತ್ತಿ ಹೊಂದುವ ಮುನ್ನ ರೋಹಿತ್ ಮತ್ತು ಕೊಹ್ಲಿ ಪಾಕಿಸ್ತಾನದಲ್ಲಿ ಆಡಬೇಕು. ಇವರಿಬ್ಬರು ಕ್ರಿಕೆಟ್ ಲೋಕದಲ್ಲಿ ಬಹುದೊಡ್ಡ ಸೂಪರ್​ಸ್ಟಾರ್ಸ್​ ಹಾಗೂ ಅಭಿಮಾನಿಗಳಿಂದ ಅಪಾರ ಪ್ರೀತಿಗೆ ಪಾತ್ರರಾದವರು. ಪಂದ್ಯಗಳನ್ನು ಅವರು ಆಡುವ, ಗೆಲ್ಲುವ ಶೈಲಿಗೆ ಫ್ಯಾನ್ಸ್ ಫಿದಾ ಆಗುತ್ತಾರೆ. ಇನ್ನು ಪಾಕಿಸ್ತಾನದ ನೆಲದಲ್ಲಿ ಕೊಹ್ಲಿ ಮತ್ತು ಶರ್ಮ ಏನಾದರೂ ಆಡಿದರೆ, ಇಲ್ಲಿನ ಅಭಿಮಾನಿಗಳ ಪ್ರೀತಿ ಮತ್ತಷ್ಟು ಹೆಚ್ಚಾಗಲಿದೆ. ಇದು ಹಿಂದಿನಕ್ಕಿಂತ ಹೆಚ್ಚಿರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ" ಎಂದು ಅಕ್ಮಲ್​ ಹೇಳಿದ್ದಾರೆ,(ಏಜೆನ್ಸೀಸ್).