ಕ್ರೀಡೆ

ಕೊಹ್ಲಿ-ರೋಹಿತ್​ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ:​ ರಾಹುಲ್​ ದ್ರಾವಿಡ್​

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಐಕಾನ್​ಗಳಾದ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಟಿ20 ವಿಶ್ವಕಪ್​ ಗೆಲುವಿನ ಬಳಿಕ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ಪೀಳಿಗೆಗೆ ಹೆಚ್ಚು ಅವಕಾಶ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದ್ದು, ಐಪಿಎಲ್ ಬಿಟ್ಟರೆ ಈ ಇಬ್ಬರು ಆಟಗಾರರು ಅಂತರಾಷ್ಟ್ರೀಯ ಮಾದರಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದರ ಹೊರತಾಗಿ ಈ ಇಬ್ಬರು ಆಟಗಾರರು 2028ರ ಒಲಿಂಪಿಕ್ಸ್​ನಲ್ಲಿ ಆಡಲಿದ್ಧಾರೆ ಎಂದು ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

ಟಿ20 ವಿಶ್ವಕಪ್​ ವಿಜೇತರಿಗೆ ಇತ್ತೀಚಿಗೆ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಈ ವೇಳೆ ಆಟಗಾರರ ಜೊತೆ ಮಾತನಾಡುತ್ತ ಹಲವು ವಿಚಾರಗಳ ಕುರಿತು ಹಂಚಿಕೊಂಡಿದ್ದರು. ಈ ವೇಳೆ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಆಡಿರುವ ಮಾತುಗಳು ಎಲ್ಲರ ಗಮನ ಸೆಳೆಯುತ್ತಿದೆ.

ಮೋದಿಜಿ, ನಾವು ಕ್ರಿಕೆಟಿಗರೇ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿಲ್ಲ. ಆದರೆ, ಈಗ ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಲಿದೆ. ಇದು ಕ್ರಿಕೆಟಿಗರು, ರಾಷ್ಟ್ರ ಮತ್ತು ಕ್ರಿಕೆಟ್ ಮಂಡಳಿಗೆ ದೊಡ್ಡದಾಗಿದೆ. ನಾವು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಮತ್ತು ಇತರ ಕ್ರೀಡಾಪಟುಗಳಿಂದ ಕಲಿಯುವುದು ಒಂದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ.

ಆ ಸಮಯಕ್ಕಾಗಿ ಬಿಸಿಸಿಐ ಹಾಗೂ ಭಾರತ ತಂಡದ ಆಟಗಾರರು ಸಿದ್ದರಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಟಿ20 ವಿಶ್ವಕಪ್​ ವಿಜೇತ ತಂಡದ ಬಹುತೇಕ ಆಟಗಾರರು ಒಲಂಪಿಕ್ಸ್​ನಲ್ಲಿ ಆಡುತ್ತಾರೆ. ಒಲಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವುದು ದೊಡ್ಡ ವಿಚಾರವಾಗಿದ್ದು, ನಾವು ಅದಕ್ಕಾಗಿ ಸಂಫೂರ್ಣ ತಯಾರಿ ನಡೆಸಬೇಕಿದೆ. 2028ರ ಒಲಿಂಪಿಕ್ಸ್​ನಲ್ಲಿ ವಿರಾಟ್​ ಹಾಗೂ ರೋಹಿತ್​ ಆಡುತ್ತಾರೆ ಎಂದು ಹೇಳುವ ಮೂಲಕ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಅಚ್ಚರಿಮೂಡಿಸಿದ್ದಾರೆ.