ಕ್ರೀಡೆ

ಮಗುವಿನ ಫೋಟೋ ತೆಗೆಯದಂತೆ ವಿರುಷ್ಕಾ ದಂಪತಿ ಮನವಿ ಮಾಡಿದ್ಯಾಕೆ..?

ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಸೋಮವಾರವಷ್ಟೇ (ಜ.11) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮಾಧ್ಯಮಗಳಿಗೆ ಮಾತ್ರ ವಿರುಷ್ಕಾ ಪುತ್ರಿಯ ಫೋಟೋ ತೆಗೆಯುವುದೇ ದೊಡ್ಡ ಚಿಂತೆಯಾಗಿದೆ. ಇದಕ್ಕಾಗಿ ಮೊನ್ನೆಯಿಂದಲೂ ಗುಂಪು ಕಟ್ಟಿಕೊಂಡು ಮಾಧ್ಯಮ ಮಂದಿ (ಫೋಟೋಗ್ರಾಫರ್ಸ್) ಆಸ್ಪತ್ರೆ ಮುಂದೆ ಜಮಾಯಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ದಯಮಾಡಿ ನಮ್ಮ ಕುಟುಂಬದ ಖಾಸಗಿ ತನಕ್ಕೆ ದಕ್ಕೆ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಾಲಕರಾಗಿ ನಿಮಗೆ (ಮಾಧ್ಯಮಗಳಿಗ) ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಮಗುವಿನ ಖಾಸಗಿತನವನ್ನು ಕಾಪಾಡಲು ಬಯಸುತ್ತೇವೆ. ಇದಕ್ಕೆ ನಿಮ್ಮ ಪ್ರೋತ್ಸಾಹ ಹಾಗೂ ಸಹಾಯ ಬೇಕಿದೆ ಎಂದು ಕೊಹ್ಲಿ ಆಸ್ಪತ್ರೆ ಹೊರಗೆ ಕಾಯುತ್ತಿದ್ದ ಮಾಧ್ಯಮ ಮಿತ್ರರ ಬಳಿ ಮನವಿ ಮಾಡಿಕೊಂಡಿದ್ದಾರೆ. ನಾವು ಮಾಡುತ್ತಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತಿರಾ ಎಂದು ನಂಬಿರುವೆ ಎಂದು ಕೊಹ್ಲಿ ಹೇಳಿದ್ದಾರೆ. ಈ ಮೂಲಕ ತಮ್ಮ ಪುತ್ರಿಯ ಫೋಟೋವನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

‘ನಮಗೆ ಹೆಣ್ಣು ಮಗು ಜನನವಾಗಿದೆ. ನಮಗೆ ಹಾರೈಸಿದ, ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಂದು ಹೊಸ ಜೀವನ ಆರಂಭಗೊಂಡಿದೆ. ದಯಮಾಡಿ ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಕೊಹಲಿ ಸೋಮವಾರವೇ ಟ್ವೀಟ್ ಮಾಡಿದ್ದರು.