More

    ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಕಂಡ ಸೈನಾ ನೆಹ್ವಾಲ್, ಕೆ.ಶ್ರೀಕಾಂತ್

    ಬ್ಯಾಂಕಾಕ್: ಮಾಜಿ ವಿಶ್ವ ನಂ.1, ಭಾರತದ ಕೆ.ಶ್ರೀಕಾಂತ್ ಹಾಗೂ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಕಂಡಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕೆ.ಶ್ರೀಕಾಂತ್ 21-12, 21-11 ನೇರ ಗೇಮ್‌ಗಳಿಂದ ಭಾರತದವರೇ ಆದ ಸೌರಭ್ ವರ್ಮ ಅವರನ್ನು ಸೋಲಿಸಿದರು. ಪದೆ ಪದೇ ಕೋವಿಡ್ ಟೆಸ್ಟ್‌ಗೆ ಒಳಗಾಗಿ ಮೂಗಿನಲ್ಲಿ ರಕ್ತಸ್ರಾವಗಿದ್ದರಿಂದ ಮಂಗಳವಾರವಷ್ಟೇ ನೋವು ತೋಡಿಕೊಂಡಿದ್ದ ಕೆ.ಶ್ರೀಕಾಂತ್ ಕೇವಲ 32 ನಿಮಿಷಗಳಲ್ಲೇ ಗೆಲುವು ದಾಖಲಿಸಿದರು.

    ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್​?

    ಕೋವಿಡ್-19 ಪರೀಕ್ಷಾ ವರದಿಯ ಗೊಂದಲದ ನಡುವೆಯೂ ಸೈನಾ ನೆಹ್ವಾಲ್ ಪಂದ್ಯವನ್ನು ಬುಧವಾರಕ್ಕೆ ನಿಗದಿಪಡಿಸಲಾಗಿತ್ತು. ಲಂಡನ್ ಒಲಿಂಪಿಕ್ಸ್ ಪದಕ ವಿಜೇತ ಸೈನಾ 21-15, 21-15 ರಿಂದ ಮಲೇಷ್ಯಾದ ಕಿಸೊನಾ ಸೆಲ್ವಾದುರೇ ಎದುರು ಸುಲಭ ಜಯ ದಾಖಲಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಭಾರತದ ಸಮೀರ್ ವರ್ಮ ಹಾಗೂ ಎಚ್‌ಎಸ್ ಪ್ರಣಯ್ ನಿರಾಸೆ ಅನುಭವಿಸಿದರು.

    ಇದನ್ನೂ ಓದಿ: ಹಕ್ಕಿಜ್ವರದ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ: ಶುರುವಾಗಿದೆ ಟೆನ್ಷನ್ 

    * ಸಾತ್ವಿಕ್-ಚಿರಾಗ್ ಜೋಡಿಗೆ ಗೆಲುವು
    ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ 19-21, 21-16, 21-14 ರಿಂದ ಕೊರಿಯಾದ ಕಿಮ್ ಜಿ ಜಂಗ್ ಹಾಗೂ ಲೀಗ್ ಯಂಗ್ ಡೀ ಅವರನ್ನು ಮಣಿಸಿದರು. ಪುರುಷರ ಡಬಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಎಂಆರ್ ಅರ್ಜುನ್ ಹಾಗೂ ಧ್ರುವ್ ಕಪಿಲಾ ಜೋಡಿ 21-13, 8-21, 22-24 ರಿಂದ ಯೆವ್ ಸಿನ್ ಹಾಗೂ ಟಿಯೊ ಈ ಯೀ ಜೋಡಿ ಎದುರು ಸೋಲನುಭವಿಸಿತು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಿಕ್ಕಿ ರೆಡ್ಡಿ-ಸುಮೀತ್ ರೆಡ್ಡಿ ಜೋಡಿ 20-22, 17-21 ರಿಂದ ಹಾಂಕಾಂಗ್‌ನ ತಾಂಗ್ ಚುನ್ ಮಾನ್ ತ್ಸೆ ಯಿಂಗ್ ಸ್ಯೂಟ್ ಜೋಡಿ ಎದುರು ಸೋಲನುಭವಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts