ಮುಂಬೈ: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್, ಚೇಸಿಂಗ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಕ್ರೀಡಾ ಲೋಕದಲ್ಲಿ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಎಲ್ಲರಿಗೂ ತಿಳಿದಿರುವ ಚಿರಪರಿಚಿತ ವ್ಯಕ್ತಿ ಎಂದು ಹೇಳಬಹುದಾಗಿದೆ. ಇದೀಗ ವಿರಾಟ್ ಕೊಹ್ಲಿ ಬಾಲಿವುಡ್ನ ಸೂಪರ್ಸ್ಟಾರ್ಗಳಾದ ರಣವೀರ್ ಸಿಂಗ್ ಹಾಗೂ ಶಾರುಖ್ ಖಾನ್ರನ್ನು ಹಿಂದಿಕ್ಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಹಾಗೂ ರಣವೀರ್ ಸಿಂಗ್ರನ್ನು ಹಿಂದಿಕ್ಕುವ ಮೂಲಕ ವಿರಾಟ್ ದೇಶದ ನಂಬರ್ 1 ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಸೆಲಿಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2023ರಲ್ಲಿ ಬಿಡುಗಡೆಯಾದ ಬ್ರ್ಯಾಂಡ್ ವ್ಯಾಲ್ಯೂ ಪ್ರಕಾರ ಕೊಹ್ಲಿ ಅವರ ಪಾಪ್ಯುಲಾರಿಟಿ ಕಳೆದ ವರ್ಷಕ್ಕಿಂತ ಈ ವರ್ಷ 29 ರಷ್ಟು ಏರಿಕೆಯಾಗಿದ್ದು, $227.9 ಮಿಲಿಯನ್ ತಲುಪಿದೆ. ಈ ಮೂಲಕ ವಿರಾಟ್ ದೇಶದ ನಂಬರ್ 1 ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಸೆಲಿಬ್ರಿಟಿ ಎಂದು ಖ್ಯಾತಿ ಪಡೆದಿದ್ದಾರೆ.
ವರ್ಷದಿಂ ವರ್ಷಕ್ಕೆ ಹೋಲಿಸಿದರೆ ಸೆಲೆಬ್ರಿಟಿಗಳ ಬ್ರ್ಯಾಂಡ್ ವ್ಯಾಲ್ಯೂ ಶೇ 14.2ರಷ್ಟು ಹೆಚ್ಚಳವಾಗುತ್ತಿದ್ದು, ಇದು ಜಾಹೀರಾತು, ಡಿಜಿಟಲ್ ಫ್ಲಾಟ್ಫಾರ್ಮ್ಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳನ್ನು ಒಳಗೊಂಡಿದೆ. ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ರಣವೀರ್ ಕಪೂರ್ ($203.1 ಮಿಲಿಯನ್), ಶಾರುಖ್ ಖಾನ್ ($120.7 ಮಿಲಿಯನ್), ಅಕ್ಷಯ್ ಕುಮಾರ್ ($111.7 ಮಿಲಿಯನ್), ಆಲಿಯಾ ಭಟ್ ($101.1 ಮಿಲಿಯನ್) ನಂತರ ಸ್ಥಾನಗಳಲ್ಲಿದ್ದಾರೆ.