ಕ್ರೀಡೆ

ಗೋಲ್ಡನ್​ ಡಕ್​ ಆಗುವುದರಿಂದ Virat Kohli ಜಸ್ಟ್​ ಮಿಸ್​; ವೈರಲ್​ ವಿಡಿಯೋ ನೋಡಿದ್ರೆ ತಿಳಿಯುತ್ತೆ ಔಟ್ Or ನಾಟೌಟ್?

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ (Border Gavaskar Trophy Test Series) ಅಂತಿಮ ಪಂದ್ಯದಲ್ಲಿ ಪ್ರವಾಸಿ ತಂಡವು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದು, ಟೀಮ್​ ಇಂಡಿಯಾಗೆ ಆತಿಥೇಯರು ಆರಂಭಿಕ ಆಘಾತವನ್ನು ನೀಡಿದ್ದಾರೆ. ಆರಂಭಿಕರಾದ ಜೈಸ್ವಾಲ್ ಹಾಗೂ ರಾಹುಲ್​​ ಅಲ್ಪಮೊತ್ತಕ್ಕೆ ಔಟಾದರೆ ಮಾಜಿ ನಾಯಕ ನಾಯಕ ವಿರಾಟ್​ ಕೊಹ್ಲಿ (Virat Kohli) ಗೋಲ್ಡನ್​ ಡಕ್​ ಆಗುವುದರಲ್ಲಿ ಜಸ್ಟ್​ಮಿಸ್​ ಆಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿತ್ತು. 7.4 ಓವರ್‌ಗಳಲ್ಲೇ 17 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ (10) ಹಾಗೂ ಕೆ.ಎಲ್. ರಾಹುಲ್ (4) ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕ್ರೀಸಿಗಿಳಿದ ಮಾಜಿ ನಾಯಕ ವಿರಾಟ್​ ಕೊಹ್ಲಿಗೆ (Virat Kohli) ಮೊದಲ ಎಸೆತದಲ್ಲೇ ಕಠಿಣ ಸವಾಲು ಎದುರಾಗಿತ್ತು.

ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ಅವರ ಎಸೆತವು ವಿರಾಟ್​ ಕೊಹ್ಲಿ (Virat Kohli) ಬ್ಯಾಟ್‌ಗೆ ಸವರಿ ಸ್ಲಿ‌ಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಹಿಡಿದರು. ಕ್ಯಾಚ್​ ಹಿಡಿಯುತ್ತಿದ್ದಂತೆ ಸ್ಮಿತ್​, ಆಸ್ಟ್ರೇಲಿಯಾ ತಂಡದ ಆಟಗಾರರು ಹಾಗೂ ಅಭಿಮಾನಿಗಳು ಸಂಭ್ರಮಿಸಲು ಶುರು ಮಾಡಿದರು. ಅಂಪೈರ್​ ಇದನ್ಜು ರಿವೀವ್​ ಮಾಡಿ ನೋಡಿದಾಗ ಕ್ಯಾಚ್ ತೆಗೆದುಕೊಳ್ಳುವ ಸಮಯದಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಂತಿಮವಾಗಿ ತೀರ್ಪು ವಿರಾಟ್ ಕೊಹ್ಲಿ (Virat Kohli) ಪರ ಬಂದ ಕಾರಣ ಗೋಲ್ಡನ್​ ಡಕ್​ಗೆ ಬಲಿಯಾಗುವುದರಿಂದ ಪಾರಾದರು.

ಬಳಿಕ ಈ ಬಗ್ಗೆ ಮಾತನಾಡಿರುವ ಸ್ಟೀವ್ ಸ್ಮಿತ್ (Steve Smith)​, ಹೌದು, ಶೇ 100ರಷ್ಟು ಖಚಿತತೆಯಿದೆ. ನಾನು ಕ್ಯಾಚ್​ ಹಿಡಿದಿದ್ದೇನೆ ಎಂದು ಪ್ರತಿಪಾದಿಸಿದ್ದು, ಅಂಪೈರ್ ತೀರ್ಪಿನ ವಿರುದ್ಧ ಕಿಡಿಕಾರಿದ್ದಾರೆ. 69 ಎಸೆತಗಳಲ್ಲಿ 17 ರನ್ ಗಳಿಸಿದ ಕೊಹ್ಲಿ ನಿರಾಸೆ ಮೂಡಿಸಿದರು. ಮಗದೊಮ್ಮೆ ಆಫ್ ಸ್ಟಂಪ್ ಆಚೆಗಿನ ಎಸೆತದಲ್ಲೇ ಸ್ಲಿಪ್‌ನಲ್ಲಿ ನಿಂತಿದ್ದ ಫೀಲ್ಡರ್‌ಗೆ ಕ್ಯಾಚಿತ್ತು ಕೊಹ್ಲಿ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು.