ಕ್ರೀಡೆ

ರೋಹಿತ್ ಶರ್ಮ ಬೆನ್ನಲ್ಲೇ... 'ರನ್​ಮಷಿನ್​' ಹಂಚಿಕೊಂಡ ವಿಷಯ ಕೇಳಿ ಬಿಸಿಸಿಐ ಶಾಕ್: ವರದಿ | Virat Kohli

Virat Kohli: ಪ್ರಸಕ್ತ ವರ್ಷದಲ್ಲಿ ನಡೆಯುತ್ತಿರುವ ಐಪಿಎಲ್​ ಆವೃತ್ತಿ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ತಾತ್ಕಾಲಿಕ ಮುಂದೂಡಿಕೆ ಆಗಿದೆ. ಐಪಿಎಲ್​ 18ನೇ ಆವೃತ್ತಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ, ಆಡಿರುವ 11 ಪಂದ್ಯಗಳಲ್ಲಿ ಬರೋಬ್ಬರಿ 505 ರನ್​ ಗಳಿಸಿದ್ದಾರೆ. ಆರು ಸ್ಫೋಟಕ ಅರ್ಧಶತಕ ಗಳಿಸಿರುವ ಕೊಹ್ಲಿ, ರನ್​ ಚೇಸಿಂಗ್​ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ದಾಖಲೆ ಜೊತೆ ಜೊತೆಯಲ್ಲೇ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ಕೊಹ್ಲಿ ಸದ್ಯ ತಮ್ಮ ದಿಢೀರ್​ ನಿರ್ಧಾರದಿಂದ ಬಿಸಿಸಿಐಗೆ ಆಘಾತ ತಂದೊಡ್ಡಿದ್ದಾರೆ.

ಇತ್ತೀಚೆಗಷ್ಟೇ ಐಪಿಎಲ್ ಟೂರ್ನಿ ಮಧ್ಯೆಯೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಕ್ಯಾಪ್ಟನ್ ರೋಹಿತ್ ಶರ್ಮ ನಿವೃತ್ತಿ ಘೋಷಿಸಿದರು. ಈಗ ಅವರ ಹಾದಿಯಲ್ಲೇ ಸಾಗುವ ಕಟು ನಿರ್ಧಾರ ಮಾಡಿರುವ ವಿರಾಟ್ ಕೊಹ್ಲಿ, ತಾವು ಕೂಡ ಟೆಸ್ಟ್​ನಿಂದ ನಿವೃತ್ತಿ ಪಡೆಯುವುದಾಗಿ ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಸಲಿಗೆ ರೋಹಿತ್​ರಂತೆಯೇ ಕೊಹ್ಲಿ ಕೂಡ ಐಪಿಎಲ್​ ನಡುವೆಯೇ ಟೆಸ್ಟ್​ಗೆ ನಿವೃತ್ತಿ ಘೋಷಿಸುತ್ತಾರಾ? ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಲಿದೆಯೇ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

1 ವಾರ ಐಪಿಎಲ್​ ಮುಂದೂಡಿಕೆ

ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿರುವ ಕಾರಣ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಐಪಿಎಲ್​ ಟೂರ್ನಿಯನ್ನು ಬಿಸಿಸಿಐ ಒಂದು ವಾರ ರದ್ದುಗೊಳಿಸಿದೆ. ಒಂದು ವಾರದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಪಂದ್ಯಗಳನ್ನು ಆಡಿಸುವ ಕುರಿತು ಬಿಸಿಸಿಐ ನಿರ್ಧಾರ ಕೈಗೊಳ್ಳಲಿದೆ.