ನವದೆಹಲಿ: ನಾವು ನೋಡಿರುವಂತೆ ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭವಾಗುವುದಕ್ಕೂ ಮುನ್ನ ಆ ದೇಶದ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ರೀತಿಯ ಹೇಳಿಕೆ ನೀಡುವಾಗ ಬೇಕಂತಲೇ ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ಕೊಡುವ ಮೂಲಕ ಎದುರಾಳಿಗಳನ್ನು ಕೆಣಕಿ ಸುದ್ದಿಯಾಗುತ್ತಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ವಿರಾಟ್ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದ್ದು, ಸರಣಿಯಲ್ಲಿ ಸ್ಲೆಡ್ಜಿಂಗ್ಗೆ ಕಾರಣವಾಗಬಹುದಾಗಿದೆ.
ವಿರಾಟ್ ಕೊಹ್ಲಿಯೊಂದಿಗೆ ನಾನು ಜಗಳ ಆಡುವುದನ್ನು ಆನಂದಿಸುತ್ತೇನೆ. ಏಕೆಂದರೆ ನಾವು ಅನೇಕ ಬಾರಿ ಮುಖಾಮುಖಿಯಾಗಿದ್ದೇವೆ. ಆತನನ್ನು ನಾನು ಒಂದು ಅಥವಾ ಎರಡು ಔಟ್ ಮಾಡಿದ್ದೇನೆ ಅಷ್ಟೇ. ಆತ ನನ್ನ ಬೌಲಿಂಗ್ನಲ್ಲಿ ಕೆಲವೇ ಕೆಲವು ರನ್ ಗಳಿಸಿದ್ದಾನೆ. ನಾನು ಮತ್ತು ಆತ ಪ್ರತಿಬಾರಿ ಎದುರಾದಾಗಲೂ ಇಬ್ಬರು ಆ ಕ್ಷಣವನ್ನು ಆನಂದಿಸುತ್ತೇವೆ.
ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಮುಖಾಮುಖಿಯಾದಾಗ ಇದು ಬಾರ್ಡರ್ ಗವಾಸ್ಕರ್ ಟ್ರೋಫಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರೆ ಸುಳ್ಳಾಗುವುದಿಲ್ಲ. ಅವರಿಬ್ಬರು ಮಾತ್ರವಲ್ಲದೇ ನಮ್ಮ ಪೀಳಿಗೆಯ ಯುವ ಆಟಗಾರರು ಮುಖಾಮುಖಿಯಾಗುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ಧೇನೆ. ಈ ಕ್ಷಣ ಬಹಳ ರೋಮಾಂಚನಕಾರಿಯಾಗಿರುತ್ತದೆ. ಇಬ್ಬರ ಪೈಕಿ ಯಾರಾದರೂ ಒಬ್ಬರು ಸಾಕಷ್ಟು ರನ್ ಗಳಿಸಲಿದ್ದಾರೆ ಎಂದು ವೇಗಿ ಮಿಚೆಲ್ ಸ್ಟಾರ್ಕ್ ಅಭಿಪ್ರಾಯಪಟ್ಟಿದ್ದಾರೆ.