ಟೀಂ ಇಂಡಿಯಾದ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಯ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತಿರುವುದು ಗೊತ್ತೆ ಇದೆ. ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಲು ಇಚ್ಛಿಸುವ ಕೊಯ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳೊಂದಿಗೆ ಲಂಡನ್ನಲ್ಲಿದ್ದಾರೆ. ಕೊಯ್ಲಿ ಕುಟುಂಬ ಶಾಶ್ವತವಾಗಿ ಲಂಡನ್ಗೆ ಶಿಫ್ಟ್ ಆಗುತ್ತಾರೆ ಎಂಬ ವದಂತಿ ಇತ್ತು. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಸೆಲಿಬ್ರಿಟಿ ದಂಪತಿ ಲಂಡನ್ ನಗರದ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡುತ್ತಿರುವುದು, ರಸ್ತೆ ಬದಿಗಳಲ್ಲಿ ಕೊಂಡುಕೊಳ್ಳುತ್ತಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಇದೀಗ ವಿರಾಟ್ ಕೊಯ್ಲಿ ವಿಡಿಯೋವೊಂದ ಹೊರಬಿದಿದ್ದು ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆ ವಿಡಿಯೋ ನೋಡಿದ ಅಭಿಮಾನಿಗಳು ಇದನ್ನು ಎಲ್ಲಿ ಚಿತ್ರೀಕರಿಸಲಾಗಿದೆ. ಎಲ್ಲಿಗೆ ಹೊರಟಿದ್ದಾರೆ ಕಿಂಗ್ ಕೊಯ್ಲಿ ಎಂದು ಪ್ರಶ್ನಿಕೊಳ್ಳುತ್ತಿದ್ದಾರೆ. ಕೆಲವರು ಇದು ಲಂಡನ್ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಊಹಿಸುತ್ತಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ ಕೆಲವು ದಿನಗಳ ಹಳೆಯದು ಎನ್ನಲಾಗುತ್ತಿದೆ. ವಿಡಿಯೋದಲ್ಲಿ ವಿರಾಟ್ ಕೊಯ್ಲಿ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಒಬ್ಬರ ಜತೆ ಕಾಣಿಸಿಕೊಂಡಿರುವ ಅವರು ಟ್ರೈನಿಗಾಗಿ ಕಾಯುತ್ತಿದ್ದಾರೆ. ರೈಲು ಬಂದ ತಕ್ಷಣ ಅಲ್ಲಿಂದ ತೆರಳುವುದನ್ನು ಕಾಣಬಹುದಾಗಿದೆ.
ಇತ್ತೀಚೆಗೆ ಬಿಸಿಸಿಐ ಪ್ರಕಟಿಸಿದ ದುಲೀಪ್ ಟ್ರೋಫಿ ತಂಡದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಯ್ಲಿ ಜತೆಗೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಆಯ್ಕೆಯಾಗಿಲ್ಲ.(ಏಜೆನ್ಸೀಸ್)