ಕ್ರೀಡೆ

ಆರ್‌ಸಿಬಿ ಬಿಟ್ಟುಬರುವಂತೆ ಕೊಹ್ಲಿಗೆ ಒತ್ತಡ ಹೇರಿದ್ದ ಫ್ರಾಂಚೈಸಿಗಳು..!

ನವದೆಹಲಿ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ ಆರಂಭಿಕ ದಿನಗಳಿಂದಲೂ ಒಂದೇ ತಂಡದಲ್ಲಿ ಆಡುವ ಮೂಲಕ ದಾಖಲೆ ಬರೆದಿದ್ದಾರೆ. 2008ರಿಂದಲೂ ಆರ್‌ಸಿಬಿ ಭಾಗವಾಗಿರುವ ಕೊಹ್ಲಿ ಇದುವರೆಗೂ ಅದೇ ತಂಡ ಪ್ರತಿನಿಧಿಸುತ್ತಾ ಬಂದಿದ್ದಾರೆ. ತಂಡದ ನಾಯಕನಾಗಿಯೂ ಕಾರ್ಯನಿರ್ವಹಿಸಿದ ಕೊಹ್ಲಿ, 2022ರಿಂದ ಕೇವಲ ಆಟಗಾರನಾಗಿ ಮುಂದುವರಿಯುವಾಗಿ ೋಷಿಸಿದ್ದಾರೆ. ಆರ್‌ಸಿಬಿ ತಂಡ ತ್ಯಜಿಸಿ ಬರುವಂತೆ ಹಲವು ಫ್ರಾಂಚೈಸಿಗಳು ಕೊಹ್ಲಿಗೆ ಒತ್ತಡ ಹಾಕಿದ್ದವಂತೆ. ಸ್ವತಃ ಕೊಹ್ಲಿಯೇ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ನನಗೆ ಹಲವು ಫ್ರಾಂಚೈಸಿಗಳು ಒತ್ತಡ ಹೇರಿದ್ದವು. 2008ರಿಂದಲೂ ಒಂದು ಫ್ರಾಂಚೈಸಿ ನನಗೆ ಆಹ್ವಾನ ನೀಡುತ್ತಿದೆ. ಹರಾಜಿಗೆ ಆಗಮಿಸಿದರೆ ಉತ್ತಮ ಮೊತ್ತಕ್ಕೆ ಕೊಂಡುಕೊಳ್ಳುವುದಾಗಿಯೂ ಭರವಸೆ ನೀಡಿದ್ದವು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ‘ನೀವು ಒಳ್ಳೆಯವರಾದರೆ ಎಲ್ಲರೂ ಒಳ್ಳೆಯವರಾಗಿರುತ್ತಾರೆ. ನೀವು ಕೆಟ್ಟವರಾದರೆ ಎಲ್ಲರೂ ನಿಮ್ಮಿಂದ ಹಿಂದೆ ಸರಿಯುತ್ತಾರೆ. ಇದೇ ಜೀವನ’ ಎಂದು ಕೊಹ್ಲಿ ಹೇಳಿದ್ದಾರೆ.

2016ರ ಐಪಿಎಲ್ ಫೈನಲ್ ಪಂದ್ಯ ಸೋಲು ಇನ್ನು ಕಾಡುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸನ್‌ರೈಸರ್ಸ್‌ ಎದುರು ನಡೆದ ಪಂದ್ಯದಲ್ಲಿ 209 ರನ್ ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ, ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 109 ರನ್‌ಗಳಿಸಿದ್ದರೂ ಗೆಲುವಿನ ದಡ ಸೇರಲು ವಿಫಲವಾಯಿತು. 9 ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 100 ರನ್‌ಗಳಿಸಿದ್ದರೂ ಗೆಲುವಿನ ಕಾಣಲು ವಿಫಲವಾದೆವು ಎಂದು ಕೊಹ್ಲಿ ಹೇಳಿದ್ದಾರೆ.