More

    ಫಿನಿಷರ್ ದಿನೇಶ್ ಬಾನಾ ಆಯ್ಕೆ ಹಿಂದಿದೆ ರೋಚಕ ಸ್ಟೋರಿ..!

    ನವದೆಹಲಿ: ಸತತ ಎರಡು ಸಿಕ್ಸರ್ ಸಿಡಿಸಿ ಫೈನಲ್ ಪಂದ್ಯದ ಫಿನಿಷರ್ ಆಗಿ ಹೊರಹೊಮ್ಮಿರುವ ದಿನೇಶ್ ಬಾನಾ, ಕಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದೇ ರೋಚಕ. ಕಿರಿಯರ ತಂಡದ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ದಿನೇಶ್ ಬಾನಾ ಆಯ್ಕೆ ಸಮಿತಿಯ ಆಯ್ಕೆಯಾಗಿರಲಿಲ್ಲ. ಆದರೆ, ಆಯ್ಕೆ ಸಮಿತಿ ಗಮನಸೆಳೆಯಲು ತಂಡದ ಸಹಪಾಠಿ ಹಾಗೂ ಗೆಳೆಯ ನಿಶಾಂತ್ ಸಿಂಧು ಹೇಳಿದ ಮಾತಿನಿಂದ ಸ್ಫೂರ್ತಿ ಪಡೆದ ದಿನೇಶ್ ಬಾನಾ, 19 ವಯೋಮಿತಿ ವಿಭಾಗದ ಚಾಲೆಂಜರ್ ಟ್ರೋಫಿಯ ಪಂದ್ಯವೊಂದರಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಗಮನಸೆಳೆದಿದ್ದರು.

    ಭಾರತ ಬಿ ಹಾಗೂ ಭಾರತ ಎಫ್ ನಡುವಿನ ಪಂದ್ಯ ವೀಕ್ಷಿಸಲು ಆಯ್ಕೆ ಸಮಿತಿ ಸದಸ್ಯರು ಬರುತ್ತಾರೆ, ಈ ವೇಳೆ ಉತ್ತಮ ನಿರ್ವಹಣೆ ತೋರು ಎಂದು ನಿಶಾಂತ್ ಹೇಳಿದರಂತೆ. ಇದಕ್ಕೆ ಪ್ರತಿಕ್ರಿಯಿಸಿದ ಬಾನಾ, ನಾನು ಎಷ್ಟು ಸಿಕ್ಸರ್ ಸಿಡಿಸುವೆ ಅಂತ ನೀನೆ ಲೆಕ್ಕಾ ಹಾಕಿಕೋ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ 98 ಎಸೆತಗಳನ್ನು ಎದುರಿಸಿದ ಬಾನಾ, 14 ಸಿಕ್ಸರ್, 10 ಬೌಂಡರಿ ಒಳಗೊಂಡಂತೆ 170 ರನ್ ಪೇರಿಸಿ ಆಯ್ಕೆ ಸಮಿತಿಯ ಗಮನಸೆಳೆದಿದ್ದಾರೆ. ಬಾನಾ ನಿರ್ವಹಣೆಗೆ ಮನಸೋತ ಆಯ್ಕೆ ಸಮಿತಿ 19 ವಯೋಮಿತಿ ವಿಶ್ವಕಪ್‌ಗೆ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದು ಈಗ ಇತಿಹಾಸ.

    5ನೇ ಬಾರಿಗೆ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿತು. ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪ್ರತಿಭಾನ್ವಿತ ಆಟಗಾರ ರಾಜ್ ಬಾವಾ (35 ರನ್, 54 ಎಸೆತ, 2 ಬೌಂಡರಿ, 1 ಸಿಕ್ಸರ್, 31ಕ್ಕೆ 5) ಆಲ್ರೌಂಡ್ ನಿರ್ವಹಣೆ ಫಲವಾಗಿ ಭಾರತ ತಂಡ 4 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. 24 ವರ್ಷಗಳ ಪ್ರಶಸ್ತಿ ಸುತ್ತಿಗೇರಿದ್ದ ಇಂಗ್ಲೆಂಡ್ ತಂಡ ನಿರಾಸೆ ಅನುಭವಿಸಿತು. ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ ಭಾರತ ಈ ಪೈಕಿ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts