ಮೆಲ್ಬೋರ್ನ್: ವಿರಾಟ್ ಕೊಹ್ಲಿ... ವಿಶ್ವ ಮಟ್ಟದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣಿಸುವಕೊಳ್ಳುವ ವಿರಾಟ್ ಕೊಹ್ಲಿಯ ಆಟ ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.
ಟಿ-20 ವಿಶ್ವಕಪ್ನ ಮೊದಲ ಪಂದ್ಯವನ್ನು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುತ್ತಿದೆ. ಕ್ರಿಕೆಟ್ ಪ್ರೇಮಿಗಳಂತೂ ಈ ಹೈವೋಲ್ಟೇಜ್ ಪಂದ್ಯ ಆರಂಭವಾಗಲು ಕಾದು ಕುಳಿತಿದ್ದಾರೆ. ಅಂತೆಯೇ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.
ಮೆಲ್ಬೋರ್ನ್ನಲ್ಲಿ ನಡೆಯಲಿರುವ ಭಾರತ - ಪಾಕಿಸ್ತಾನ ನಡುವಣ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಯೊಬ್ಬ ಬಂದಿದ್ದಾನೆ. ಈತ ಬಂದಿರುವುದು ಪಾಕಿಸ್ತಾನದಿಂದ. ಹೌದು, ಪಾಕಿಸ್ತಾನದ ಪ್ರಜೆಯೊಬ್ಬ ವಿರಾಟ್ ಕೊಹ್ಲಿ ಅಭಿಮಾನಿ. ಹೀಗಾಗಿ ವಿರಾಟ್ ಆಟವನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಆಗಮಿಸಿದ್ದಾನೆ.
ಪಾಕಿಸ್ತಾನ ತಂಡದ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದಿದ್ದಾನೆ. ಸ್ವಾರಸ್ಯವೆಂದರೆ ತಾನು ಧರಿಸಿರುವ ಪಾಕಿಸ್ತಾನ ತಂಡದ ಜೆರ್ಸಿಯ ಹಿಂದೆ ವಿರಾಟ್ ಕೊಹ್ಲಿ ಎಂದು ಬರೆಸಿಕೊಂಡಿದ್ದಾನೆ. ಈತನ ಫೋಟೋ ತೆಗೆದು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಫೋಟೊ ಸಖತ್ ವೈರಲ್ ಆಗುತ್ತಿದೆ.