ನವದೆಹಲಿ: ಇಲ್ಲಿರುವ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ (ಜನವರಿ 14) ನಡೆದ ಎರಡನೇ ಟಿ-20 ಪಂದ್ಯದ ವೇಳೆ ನಡೆದ ವಿಚಿತ್ರ ಘಟನೆಯೊಂದು ಎಲ್ಲರ ಗಮನ ಸೆಳೆದಿತ್ತು. ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಮೈದಾನದ ಭದ್ರತೆಯನ್ನು ಮುರಿದು ಮೈದಾನಕ್ಕೆ ನುಗ್ಗಿ ಅಪ್ಪಿಕೊಂಡಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದಿದ್ದ ಮೈದಾನದ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು.
ಬಳಿಕ ಮಾತನಾಡಿದ್ದ ವ್ಯಕ್ತಿ ತನಗೆ ಕೊಹ್ಲಿ ಕಂಡರೆ ತುಂಬಾ ಇಷ್ಟ ಆ ಕಾರಣಕ್ಕೆ ನಾನು ಮೈದಾನದ ಭದ್ರತೆಯನ್ನು ಲೆಕ್ಕಿಸದೆ ಅವರನ್ನು ಅಪ್ಪಿಕೊಳ್ಳುವ ಧೈರ್ಯ ಮಾಡಿದ್ದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ಆತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ಲೋಕ ಸಮರಕ್ಕೂ ಮುನ್ನ ಪಕ್ಷಾಂತರ ಪರ್ವ; ಕಾಂಗ್ರೆಸ್-ಎಎಪಿ ತೊರೆದು ಬಿಜೆಪಿ ಸೇರಿದ 2 ಸಾವಿರಕ್ಕೂ ಅಧಿಕ ಮುಖಂಡರು
ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡಿದ್ದ ಯುವಕ ತನ್ನ ಸ್ವಗ್ರಾಮಕ್ಕೆ ತೆರಳಿದ್ದು, ಆತನಿಗೆ ಅದ್ದೂರಿ ಸ್ವಾಗತ ದೊರೆತಿದೆ. ಕೊಹ್ಲಿಯ ಅಭಿಮಾನಿಗೆ ಸ್ವಾಗತ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ವಾಗತಿಸಲು ಸಾಕಷ್ಟು ಮಂದಿ ಆಗಮಿಸಿರುವುದನ್ನು ನಾವು ಕಾಣಬಹುದಾಗಿದೆ. ಅವರಲ್ಲಿ ಒಬ್ಬರು ಆತನಿಗೆ ಹೂವಿನ ಹಾರವನ್ನು ಹಾಕುವುದನ್ನು ಕಾಣಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಭರದಲ್ಲಿ ಯುವಕ ಈ ರೀತಿ ಮಾಡಿದ್ದಾನೆ. ಆತನಿಂದ ಮೆಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.