ಭಾರತದ ಮಾಜಿ ಅಟಗಾರ ಕ್ರಿಕೆಟ್ನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ಕ್ಕಿಂತ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Kohli) ಭಾರತದ 'ಶ್ರೇಷ್ಠ ವೈಟ್ ಬಾಲ್ ಆಟಗಾರ' ಎಂದು ಮಾಜಿ ಅಟಗಾರ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.
ವಿರಾಟ್ ಕೊಹ್ಲಿ ಅಂತವರು ಜೀವನದಲ್ಲಿ ಒಮ್ಮೆ ಮಾತ್ರ ಆಡುವ ಆಟಗಾರ, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಬರೊಬ್ಬರಿ 81 ಶತಕಗಳನ್ನು ಬಾರಿಸುವುದು ಎಂದರೆ ಸುಮ್ಮನೆ ಮಾತಲ್ಲ. ಇದನ್ನೂ ನಂಬಲು ಅಸಾಧ್ಯವೆನಿಸುತ್ತದೆ. ಬಹುಶ ನನ್ನ ಪ್ರಕಾರ ಜಗತ್ತು ಕಂಡ ಶ್ರೇಷ್ಠ ವೈಟ್ ಬಾಲ್ ಆಟಗಾರ ಎಂದು ಬಂಗಾಳ ಕ್ರಿಕೆಟ್ ಆಸೋಸಿಯೆಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮಲ್ಲಿ ಗಂಗೂಲಿ ಶ್ಲಾಘಿಸಿದ್ದಾರೆ.
ಪರ್ತ್ನಲ್ಲಿ ಸಂಚುರಿ ಬಾರಿಸಿದ ಅವರ ಬ್ಯಾಟಿಂಗ್ ನೋಡಿ ನನಗೆ ಆಶ್ಚರ್ಯವಾಯಿತು. ಅವರ ಪ್ರಯತ್ನ ಚೆನ್ನಾಗಿತ್ತು. ಆದರೆ ಮ್ಯಾಚ್ ಸೊತ್ತಿದ್ದು ಎಲ್ಲರಿಗೂ ನಿರಾಸೆಯಾಗಿದೆ. ಸಾಮಾನ್ಯವಾಗಿ ಆಟಗಾರನಿಗೆ ಶಕ್ತಿ ಮತ್ತು ದೌರ್ಬಲ್ಯಗಳಿರುತ್ತದೆ ಅದನ್ನು ಒಪ್ಪಲೇಬೇಕು ಎಂದಿದ್ದಾರೆ.
ಇದನ್ನೂ ಓದಿ: ಕುವೈತ್ನಿಂದ ಭಾರತಕ್ಕೆ ಬಂದು ಹೋದ ಬೆನ್ನಲ್ಲೇ ಟ್ರಕ್ ಚಾಲಕನಿಗೆ ಒಲಿಯಿತು 10 ಕೋಟಿ ಬಂಪರ್ ಬಹುಮಾನ! Truck Driver
ಕಳೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪಂದ್ಯದಲ್ಲಿ ವಿರಾಟ್ ಮತ್ತು ನಾಯಕ ರೋಹಿತ್ ಶರ್ಮಾರ ಕಳಪೆ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿರುವ ಗಂಗೂಲಿ '' ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಪಿಂಯನ್ ಟ್ರೋಫಿಯಲ್ಲಿ ಫಾರ್ಮ್ ಬಗ್ಗೆ ಸಲ್ಪ ಅನುಮಾನ ಇತ್ತು. ಆದರೆ, ವಿರಾಟ್ನಲ್ಲಿ ಸಾಕಷ್ಟು ಸಾಮಾರ್ಥ್ಯ ಇದೆ. ಅವರು ಎಂತಹ ಕೆಟ್ಟ ಪರಿಸ್ಥಿತಿಯಲ್ಲಿ ರನ್ ಹೊಳೆ ಹರಿಸಲಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರ ಫಾರ್ಮ್ ಬಗ್ಗೆ ಹೆಚ್ಚಾಗಿ ಚಿಂತಿಸುವ ಅವಶ್ಯಕತೆ ಇಲ್ಲ. ಹೀಗಾಗಿ, ಅವರನ್ನು ನಾನು ಭಾರತದ 'ಶ್ರೇಷ್ಠ ವೈಟ್ ಬಾಲ್ ಆಟಗಾರ ಎನ್ನುತ್ತೇನೆ ಎಂದು ಕಿಂಗ್ ವಿರಾಟ್ ಬಗ್ಗೆ ಹಾಡಿ ಹೊಗಳಿದ್ದಾರೆ.(ಏಜೆನ್ಸೀಸ್)