ಕ್ರೀಡೆ

ಅನುಷ್ಕಾ ಶರ್ಮ ಕೇಳಿದ ಪ್ರಶ್ನೆಗೆ ಪ್ರೇಮಾನಂದ ಮಹಾರಾಜ್ ಕೊಟ್ಟ ಕುತೂಹಲಕಾರಿ ಉತ್ತರವಿದು... | Virat & Anushka

Virat & Anushka: ಟೀಮ್ ಇಂಡಿಯಾ ರನ್​ಮಷಿನ್, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಈ ಮೂಲಕ ಟಿ20 ಮತ್ತು ಟೆಸ್ಟ್ ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಎಂದು ಬೇಸರ ಹೊರಹಾಕಿದ್ದ ಅಸಂಖ್ಯಾತ ಅಭಿಮಾನಿಗಳಿಗೆ ಮುಂದಿನ ಏಕದಿನ ಪಂದ್ಯಗಳು ಮತ್ತು ಐಪಿಎಲ್​ನಲ್ಲಿ ಮಾತ್ರ ಕೊಹ್ಲಿ ನೋಡಲು ಸಾಧ್ಯ. ತಮ್ಮ ನಿವೃತ್ತಿ ಬೆನ್ನಲ್ಲೇ ಆಧ್ಯಾತ್ಮಿಕ ಒಲವಿನತ್ತ ಸಾಗಿರುವ ವಿರಾಟ್ ದಂಪತಿ, ಇಂದು (ಮೇ.13) ಉತ್ತರ ಪ್ರದೇಶದ ಬೃಂದಾವನ ಧಾಮಕ್ಕೆ ಭೇಟಿ ನೀಡಿದರು.

ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರನ್ನು ಖುದ್ದಾಗಿ ಭೇಟಿಯಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ, ಜೀವನಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಗುರೂಜಿಯೊಂದಿಗೆ ಚರ್ಚಿಸಿದರು. ಆಧ್ಯಾತ್ಮಿಕ ಗುರುಗಳ ಜೊತೆಗಿನ ಸಂಭಾಷಣೆಯಲ್ಲಿ, ಅನುಷ್ಕಾ. “ಕ್ಯಾ ನಾಮ್ ಜಾಪ್ ಸೆ ಹೋ ಜಾಯೇಗಾ?” (ಭಗವಂತನ ಹೆಸರನ್ನು ಜಪಿಸುವುದರಿಂದ ಏನಾದರೂ ಪ್ರಯೋಜನವಿದೆಯೇ?) ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿ ಮಹಾರಾಜ್​, "ಖಂಡಿತ... ನಾನು ಇದನ್ನು ನನ್ನ ಜೀವನ ಅನುಭವದಿಂದ ಹಂಚಿಕೊಳ್ಳುತ್ತಿದ್ದೇನೆ. ಸಂಕ ಯೋಗ, ಅಷ್ಟಾಂಗ ಯೋಗ ಮತ್ತು ಕರ್ಮ ಯೋಗವನ್ನು ಅನುಭವಿಸಿದ ನಂತರ ನಾನು ಭಕ್ತಿ ಯೋಗಕ್ಕೆ ಬಂದೆ" ಎಂದು ಉತ್ತರಿಸಿದರು.

"ಇದು ನನ್ನ ವೈಯಕ್ತಿಕ ಅನುಭವ. ವ್ಯಕ್ತಿಯ ಆಲೋಚನೆ ಬದಲಾದಾಗ, ದೈವಿಕ ಅನುಗ್ರಹವಿದೆ. ಭಗವಂತನು ತನ್ನ ಭಕ್ತರಿಗೆ ಶಾಂತಿಯ ಮಾರ್ಗವನ್ನು ತೋರಿಸುತ್ತಾನೆ. ಒಬ್ಬರ ಖ್ಯಾತಿ ಮತ್ತು ವೈಭವದ ಹೆಚ್ಚಳವನ್ನು ದೇವರ ಅನುಗ್ರಹವೆಂದು ಪರಿಗಣಿಸಲಾಗುವುದಿಲ್ಲ ಎಂಬುದು ನಿಜ. ವ್ಯಕ್ತಿಯ ಆಲೋಚನೆ ಬದಲಾದಾಗ, ಆ ದೇವರ ಅನುಗ್ರಹವಿರುತ್ತದೆ. ದೇವರು ನಮಗೆ ಅಂತಿಮ ಶಾಂತಿಯ ಮಾರ್ಗವನ್ನು ತೋರಿಸುತ್ತಾನೆ. ನನ್ನ ಭಕ್ತ ಎಂದಿಗೂ ನಾಶವಾಗುವುದಿಲ್ಲ ಎಂದು ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಸಂತೋಷದಿಂದ ದೇವರ ಹೆಸರನ್ನು ಜಪಿಸಿ" ಎಂದು ಗುರೂಜಿ ಅನುಷ್ಕಾ ಕೇಳಿದ ಪ್ರಶ್ನೆಗೆ ಉತ್ತರಿಸಿದರು,(ಏಜೆನ್ಸೀಸ್).