ಕುಸ್ತಿ ಪಂದ್ಯಾವಳಿಯಿಂದ ವಿನೇಶ್​ ಪೊಗಾಟ್​ ಬ್ಯಾನ್​ 
ಕ್ರೀಡೆ

ಕುಸ್ತಿ ಅಖಾಡದಿಂದ ವಿನೇಶ್​ ಪೊಗಾಟ್​ ಔಟ್:​ ಕುಸ್ತಿಪಟುವಿಗೆ ನಿಷೇಧ ಹೇರಿದ ಕುಸ್ತಿ ಒಕ್ಕೂಟ! Vinesh Phogat Ban

ಪ್ರಮುಖ ಮುಖ್ಯಾಂಶಗಳು

  • ಕುಸ್ತಿ ಪಂದ್ಯಾವಳಿಯಿಂದ ವಿನೇಶ್​ ಪೊಗಾಟ್​ ಬ್ಯಾನ್​
  • ಜೂನ್​ 2026 ರ ವರೆಗೆ ದೇಶೀಯ ಟೂರ್ನಾಮೆಂಟ್​ನಲ್ಲಿ ಭಾಗವಹಿಸುವಂತಿಲ್ಲ
  • ನಿಯಮ ಬಾಹಿರ ಹಾಗೂ ಆಂಟಿ ಡೋಪಿಂಗ್​ ಪರೀಕ್ಷೆಗೆ ಗೈರಾದ ಹಿನ್ನಲೆ ಈ ನಿರ್ಧಾರ
ಉತ್ತರ ಪ್ರದೇಶ: ಮೇ.10 ರಿಂದ 12 ರ ವರೆಗೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆಯಲಿರುವ ನ್ಯಾಷನಲ್​ ಓಪನ್​ ರ್ಯಾಕಿಂಗ್​ ಟೂರ್ನಾಮೆಂಟ್​ನಲ್ಲಿ ಭಾರತದ ಖ್ಯಾತ ಕುಸ್ತಿಪಟು ವಿನೇಶ್​ ಪೊಗಾಟ್ (Vinesh Phogat Ban)​ ಭಾಗವಹಿಸಲು ಭಾರತೀಯ ಕುಸ್ತಿ ಒಕ್ಕೂಟ (WFI) ನಿಷೇಧಿಸಿದೆ.
ಕುಸ್ತಿ ಪಂದ್ಯಾವಳಿಯಲ್ಲಿ ಅಶಿಸ್ತು ಹಾಗೂ ಆಂಟಿ ಡೋಪಿಂಗ್​ ಪರೀಕ್ಷೆಗೆ ಗೈರಾಗಿರುವ ಕಾರಣ ಜೂನ್​ 26, 2026 ರ ವರೆಗೆ ವಿನೇಶ್​ ಪೊಗಾಟ್​ ದೇಶಿಯ ಪಂದ್ಯಾವಳಿಯಲ್ಲಿ ಭಾಗವಿಸುವಂತಿಲ್ಲ ಎಂದು ಕುಸ್ತಿ ಒಕ್ಕೂಟ ಶೋ-ಕಾಸ್​ ನೋಟಿಸ್​ ಜಾರಿ ಮಾಡಿದೆ.
2024 ರ ಪ್ಯಾರಿಸ್​ ಒಲಂಪಿಕ್ಸ್​ನಲ್ಲಿ ತನ್ನ ಹೆಚ್ಚಿನ ತೂಕದ ಕಾರಣ ಫೈನಲ್​ ಪಂದ್ಯಾವಳಿಯಲ್ಲಿ ಹೊರಬಿದ್ದು, ದೇಶದ ಅವಮಾನಕ್ಕೆ ಕಾರಣವಾಗಿದ್ದಾರೆ. ನಂತರ ತಾನು ಕುಸ್ತಿಯಲ್ಲಿ ಮುಂದುವರಿಯುವುದಿಲ್ಲ ಎಂಬ ಹೇಳಿಕೆ ಸಹ ನೀಡಿದ್ದು, ಈಗ ಮತ್ತೆ ಕುಸ್ತಿಯಲ್ಲಿ ಸಕ್ರೀಯರಾಗಲು ಬಯಸುತ್ತಿದ್ದಾರೆ.
ಆದರೆ ಇವರು ಕುಸ್ತಿ ಒಕ್ಕೂಟದ ಯಾವುದೇ ನಿಯಮಗಳನ್ನು ಪಾಲಿಸದ ಹಿನ್ನಲೆಯಲ್ಲಿ ವಿನೇಶ್​ ಅವರನ್ನು ಪಂದ್ಯಾವಳಿಗಳಿಂದ ನಿಷೇಧಿಸಲಾಗಿದೆ ಎಂದು ಭಾರತೀಯ ಕುಸ್ತಿ ಒಕ್ಕೂಟ ತಾನು ನೀಡಿರುವ ನೋಟಿಸ್​ನಲ್ಲಿ ತಿಳಿಸಿದೆ. ಗೊಂಡಾದಲ್ಲಿ ನಡೆಯಲಿರುವ ಕುಸ್ತಿ ಪಂದ್ಯಾವಳಿ ಮೂಲಕ ಮತ್ತೆ ಮುನ್ನಲೆಗೆ ಬರುವ ತವಕದಲ್ಲಿದ್ದ ವಿನೇಶ್​ಗೆ ಇದು ದೊಡ್ಡ ಪೆಟ್ಟಾಗಿದ್ದು, ಈ ನೋಟಿಸ್​ಗೆ ಪೊಗಾಟ್​ 14 ದಿನಗಳಲ್ಲಿ ಉತ್ತರಿಸಬೇಕಾಗಿದೆ.

ವಿನೇಶ್​ ಮತ್ತು ಒಕ್ಕೂಟದ ನಡುವೆ ಹಗ್ಗ ಜಗ್ಗಾಟ!

2024 ರ ಪ್ಯಾರಿಸ್​ ಒಲಂಪಿಕ್​ನಲ್ಲಿ ನಡೆದ ಘಟನೆ ಬಳಿಕ ವಿನೇಶ್​ ಪೊಗಾಟ್​ ಹಾಗೂ ಕುಸ್ತಿ ಒಕ್ಕೂಟದ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ನನಗೆ ಯಾವುದೇ ಒಂದು ಉತ್ತಮ ಪಂದ್ಯಾವಳಿ ಮೂಲಕ ಮರು ಪ್ರವೇಶ ಮಾಡಲು ಒಕ್ಕೂಟ ಬಿಡುತ್ತಿಲ್ಲ ಎನ್ನುವುದು ವಿನೇಶ್​ ಅವರ ವಾದವಾಗಿದೆ.
ಆದರೆ ವಿನೇಶ್​ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಅವಳು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸದೆ, ನೇರವಾಗಿ ಪಂದ್ಯಾವಳಿಗೆ ಭಾಗವಹಿಸುವುದಾಗಿ ಹೇಳುತ್ತಾಳೆ. ಆಂಟಿ ಡೋಪಿಂಗ್​ ಪರೀಕ್ಷೆಗೆ ಸಹ ಸರಿಯಾಗಿ ಹಾಜರಾಗುವುದಿಲ್ಲ. ಒಬ್ಬ ಆಟಗಾರ್ತಿ ಸಲುವಾಗಿ ಒಕ್ಕೂಟದ ನಿಯಮ ಬದಲಾಗುವುದಿಲ್ಲ ಎನ್ನುವುದು ಒಕ್ಕೂಟದ ವಾದವಾಗಿದೆ, (ಏಜನ್ಸೀಸ್​).