ಕ್ರೀಡೆ

ಅರ್ಜುನ್ ತೆಂಡೂಲ್ಕರ್ ‘ಕಲ್ಲಿದ್ದಲು’; ಸಚಿನ್​ ತೆಂಡೂಲ್ಕರ್​​ ಪುತ್ರನ ಬಗ್ಗೆ ಯುವಿ ತಂದೆ ಯೋಗರಾಜ್​ ಹೀಗೆಳಿದ್ದೇಕೆ?

ನವದೆಹಲಿ: ಟೀಂ ಇಂಡಿಯಾದ ಆಲ್​ರೌಂಡರ್​ ಯುವರಾಜ್​​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ ನೀಡಿರುವ ಹೇಳಿಕೆಯೂ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಸಂದರ್ಶನವೊಂದರಲ್ಲಿ ಅರ್ಜುನ್ ತೆಂಡೂಲ್ಕರ್ ನಿಮ್ಮ ಬಳಿ ತರಬೇತಿಗಾಗಿ ಬಂದಿದ್ದಾರೆ. ಅವರ ಭವಿಷ್ಯವನ್ನು ನೀವು ಹೇಗೆ ನೋಡುತ್ತೀರಿ? ಎಂದು ಯೋಗರಾಜ್​ ಸಿಂಗ್​ ಅವರಿಗೆ ಕೇಳಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ಕಲ್ಲಿದ್ದಲು ಗಣಿಯಲ್ಲಿ ವಜ್ರವನ್ನು ನೋಡಿದ್ದೀರಾ? ಅವನು (ಅರ್ಜುನ್) ಕೇವಲ ಕಲ್ಲಿದ್ದಲು. ನೀವು ಅದನ್ನು ಕಲ್ಲಿದ್ದಲು ಗಣಿಯಿಂದ ಹೊರತೆಗೆದರೆ ಅದು ಕೇವಲ ಕಲ್ಲು. ಅದನ್ನು ಶಿಲ್ಪಿಯ ಕೈಗೆ ಕೊಟ್ಟರೆ ಬೆಲೆ ಕಟ್ಟಲಾಗದ ಕೋಹಿನೂರಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ ವಜ್ರವು ಅದರ ಮೌಲ್ಯವನ್ನು ತಿಳಿದಿಲ್ಲದ ಯಾರಿಗಾದರೂ ತಲುಪಿದರೆ, ಅವನು ಅದನ್ನು ನಾಶಪಡಿಸುತ್ತಾನೆ. ಯೋಗರಾಜ್ ಸಿಂಗ್ ಮಹಾನ್ ಕುಶಲಕರ್ಮಿ ಎಂದು ನಾನು ಹೇಳುವುದಿಲ್ಲ. ನನ್ನ ತಂದೆಯ ಕೈಯಲ್ಲಿ ಮ್ಯಾಜಿಕ್ ಇದೆ ಎಂದು ಯುವರಾಜ್ ಸಿಂಗ್ ಹೇಳುತ್ತಾನೆ ಎಂದು ತಿಳಿಸಿದ್ದಾರೆ. ಯೋಗರಾಜ್ ಸಿಂಗ್​​ರ ಬಳಿ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದಾರೆ.

ಈ ಹಿಂದೆ ಯುವರಾಜ್​ ಸಿಂಗ್ ನನ್ನನ್ನು ನಿಂದಿಸಿದ್ದರು. ಹಿಟ್ಲರ್, ಡ್ರ್ಯಾಗನ್ ಸಿಂಗ್, ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ ಎಂದಿದ್ದರು. ನನ್ನ ಮನೆಯಲ್ಲಿ ಎಲ್ಲರೂ ನನ್ನನ್ನು ದ್ವೇಷಿಸುತ್ತಿದ್ದರು. ನನ್ನ ಸಂಬಂಧಿಕರು ನಾನು ತಂದೆಯಾಗಬಾರದಿತ್ತು ಎಂದಿದ್ದರು. ಯುವರಾಜ್​ ಸಿಂಗ್​ ಬಳಿ ಅಷ್ಟು ಕಠಿಣವಾಗಿ ಇರುತ್ತಿದೆ. ಯುವರಾಜ್​ ಸಿಂಗ್​ ನಾನು ಹೇಳಿದ ಮಾರ್ಗ ಅನುಸರಿಸಿದರು. ದೇವರ ದಯೆಯಿಂದ ಯುವರಾಜ್​ ಸಿಂಗ್​ ನಿಮಗೆ ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಯೋಗರಾಜ್​ ಸಿಂಗ್​ ಅವರು, ಭಾರತೀಯ ದಂತಕಥೆಗಳಾದ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಬಗ್ಗೆ ಹೇಳಿಕೆಗಳನ್ನು ನೀಡಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದರು. ಯುವರಾಜ್ ಸಿಂಗ್ ಅವರ ವೃತ್ತಿಜೀವನದ ಆರಂಭಿಕ ಅಂತ್ಯದ ಹಿಂದೆ ಧೋನಿ ಇದ್ದಾರೆ ಎಂದು ಆರೋಪಿಸಿದ್ದರು. ಇದನ್ನು ನಾನು ಧೋನಿಗೆ ನೇರವಾಗಿ ಹೇಳಿದ್ದೇನೆ. ನಾನು ಎಂದಿಗೂ ಅವನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದರು.

ಅಲ್ಲದೆ ಕಪಿಲ್​​ ದೇವ್​​ ಕುರಿತು ನನ್ನ ಮಗ ಯುವರಾಜ್ ಸಿಂಗ್ ಒಟ್ಟು 13 ಟ್ರೋಫಿಗಳನ್ನು ಹೊಂದಿದ್ದಾರೆ. ಆದರೆ ನಮ್ಮ ಕಾಲದ ಶ್ರೇಷ್ಠ ನಾಯಕ ಕಪಿಲ್ ದೇವ್ 1983ರಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್​ನ ಟ್ರೋಫಿ ಅದೊಂದನ್ನು ಹೊಂದಿದ್ದಾರೆ. ಇಡೀ ಜಗತ್ತೇ ನಿಮ್ಮನ್ನು ಶಪಿಸುವಂತಹ ಸ್ಥಿತಿಗೆ ನಿಮ್ಮನ್ನು ಹಾಕುತ್ತೇನೆ ಎಂದಿದ್ದರು. (ಏಜೆನ್ಸೀಸ್​​)