ಕ್ರೀಡೆ

VIDEO | ಹಸುವಿನ ಹಾಲು ಕರೆದ ಶೂಟರ್​ ಮನು ಭಾಕರ್​, ವಿಡಿಯೋ ವೈರಲ್​!

ನವದೆಹಲಿ: ಅಂತಾರಾಷ್ಟ್ರೀಯ ಯುವ ಶೂಟರ್​ ಮನು ಭಾಕರ್​ ಲಾಕ್​ಡೌನ್​ ಸಮಯದಲ್ಲಿ ಹೆಚ್ಚಿನ ಸಮಯವನ್ನು ಗ್ರಾಮೀಣ ಭಾಗದ ಜೀವನದಲ್ಲೇ ಕಳೆಯುತ್ತಿದ್ದಾರೆ. ಈಗಾಗಲೆ ಕುದುರೆ ಸವಾರಿ, ಟ್ರ್ಯಾಕ್ಟರ್​ ಓಡಿಸುವ ಮತ್ತು ವಿವಿಧ ಕೃಷಿ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಮೂಲಕ ಸುದ್ದಿಯಾಗಿದ್ದ ಹರಿಯಾಣದ ಜಾಜ್ಜರ್​ನ 18 ವರ್ಷದ ಶೂಟರ್​ ಮನು ಭಾಕರ್​, ಹಸುವಿನ ಹಾಲು ಕರೆದಿರುವ ವಿಡಿಯೋ ಈಗ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಲೇ ಬಂದಿರುವ ಮನು ಭಾಕರ್​, ಇತ್ತೀಚೆಗೆ ಹಸುವಿನ ಹಾಲು ಕರೆಯುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ.

'ದೇಶ್ ಮೈ ದೇಶ್​ ಹರಿಯಾಣ, ಜಿತ್​ ಮಿಲ್ಕ್​ ದಹಿ ಖೂನಾ. ಜೈ ಜವಾನ್​ ಜೈ ಕಿಸಾನ್​' ಎಂದು ಬರೆದುಕೊಂಡಿರುವ ಮನು ಭಾಕರ್​, ಚಿಕ್ಕಮ್ಮ ನೀಲಮ್​ ಅವರಿಂದ ಹಸುವಿನ ಹಾಲು ಕರೆಯುವುದನ್ನು ಕಲಿತುಕೊಂಡಿದ್ದಾರೆ ಎನ್ನಲಾಗಿದೆ. ಮನು ಭಾಕರ್​ ಹಾಲು ಕರೆಯುತ್ತಿರುವ ವಿಡಿಯೋವನ್ನು ಈಗಾಗಲೆ ಒಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 18 ಸಾವಿರಕ್ಕೂ ಅಧಿಕ ಲೈಕ್ಸ್​​ಗಳನ್ನು ಪಡೆದುಕೊಂಡಿದೆ.