More

    VIDEO: ಲಾಕ್‌ಡೌನ್‌ನಲ್ಲಿ ಆಲ್ರೌಂಡರ್ ಆಗುತ್ತಿದ್ದಾರೆ ಶೂಟರ್ ಮನು ಭಾಕರ್!

    ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಭಾರತದ 10 ಮೀಟರ್ ಪಿಸ್ತೂಲ್ ಶೂಟರ್ ಮನು ಭಾಕರ್ ಅವರು ಈಗ ಟೋಕಿಯೊ ಒಲಿಂಪಿಕ್ಸ್ ಬಿಟ್ಟರೆ ಬೇರೆ ಯಾವುದರ ಕಡೆಗೂ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕರೊನಾದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ನಡುವೆ ಲಾಕ್‌ಡೌನ್‌ನಿಂದ ಅವರು ಶೂಟಿಂಗ್ ರೇಂಜ್‌ನತ್ತ ಹೋಗಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಸುಮ್ಮನೆ ಕುಳಿತುಕೊಳ್ಳದ ಹರಿಯಾಣದ 18 ವರ್ಷದ ಶೂಟರ್ ಮನು ಭಾಕರ್, ಲಾಕ್‌ಡೌನ್‌ನಲ್ಲಿ ಸಿಕ್ಕ ಸಮಯವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಎಲ್ಲ ರೀತಿಯ ಚಟುವಟಿಕೆಯಲ್ಲೂ ತೊಡಗಿಕೊಳ್ಳುತ್ತಿದ್ದಾರೆ.

    VIDEO: ಲಾಕ್‌ಡೌನ್‌ನಲ್ಲಿ ಆಲ್ರೌಂಡರ್ ಆಗುತ್ತಿದ್ದಾರೆ ಶೂಟರ್ ಮನು ಭಾಕರ್!

    ಇದನ್ನೂ ಓದಿ: ಭಾರತದಲ್ಲಿ ಒಬ್ಬನಲ್ಲ, ಹನ್ನೊಂದು ವಿರಾಟ್ ಕೊಹ್ಲಿ ಇದ್ದಾರೆ! ಸಕ್ಲೇನ್​ ಹೀಗೆ ಹೇಳಿದ್ಯಾಕೆ?

    ಬೈಕ್ ರೈಡಿಂಗ್, ಕಾರು ಚಾಲನೆ, ಕುದುರೆ ಸವಾರಿ, ರೂಫ್​ ಕ್ಲೈಂಬಿಂಗ್, ಟ್ರ್ಯಾಕ್ಟರ್ ಓಡಿಸುವುದು, ಕೃಷಿ, ಬಿಲ್ಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ಮನು ಭಾಕರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೀರೆ ಉಡುವುದನ್ನೂ ಕಲಿತುಕೊಂಡಿದ್ದಾರೆ. ಇವೆಲ್ಲದರ ಜತೆಗೆ ಯೋಗಾ, ಜಿಮ್ ಮೂಲಕ ಅವರು ಫಿಟ್ನೆಸ್ ಉಳಿಸಿಕೊಳ್ಳುವತ್ತ ಕೂಡ ಗಮನಹರಿಸಿದ್ದಾರೆ. ಜಾಜ್ಜರ್‌ನ ಗೊರಿಯಾ ಗ್ರಾಮದಲ್ಲಿನ ತಮ್ಮೆಲ್ಲ ಚಟುವಟಿಕೆಗಳನ್ನು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಕ್ರೀಡಾಪ್ರೇಮಿಗಳಿಗೆ ತಲುಪಿಸುತ್ತಿದ್ದಾರೆ.

    ಇದನ್ನೂ ಓದಿ: ಒಂದು ತಿಂಗಳಲ್ಲಿ ಚಂದ್ರನಲ್ಲಿಗೆ ಓಡಿರಿ… 3,84,400 ಕಿಲೋಮೀಟರ್!

    14ನೇ ವಯಸ್ಸಿನಲ್ಲಷ್ಟೇ ಶೂಟಿಂಗ್ ಅಭ್ಯಾಸ ಆರಂಭಿಸಿದ್ದ ಮನು, 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಶೂಟರ್ ಆಗಿದ್ದರು. 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ವರ್ಣ ಪದಕಕ್ಕೆ ಗುರಿ ಇಟ್ಟಿದ್ದರು. ಶೂಟಿಂಗ್ ವಿಶ್ವಕಪ್‌ನಲ್ಲೂ 6 ಸ್ವರ್ಣ ಜಯಿಸಿದ್ದಾರೆ. ಕರಾಟೆ, ಬಾಕ್ಸಿಂಗ್, ಟೆನಿಸ್, ಸ್ಕೇಟಿಂಗ್, ಆರ್ಚರಿ, ಮಾರ್ಷಲ್ ಆರ್ಟ್ಸ್ ಮುಂತಾದ ಕ್ರೀಡೆಗಳ ಮೇಲು ಅಪಾರವಾದ ಆಸಕ್ತಿ ಹೊಂದಿದ್ದಾರೆ. ಮನೆಯಲ್ಲೇ ಸಿಂಗಲ್ ಲೇನ್ ಶೂಟಿಂಗ್ ರೇಂಜ್ ನಿರ್ಮಿಸಿಕೊಂಡಿರುವ ಮನು ಈಗ ಅಲ್ಲೇ ಶೂಟಿಂಗ್ ಅಭ್ಯಾಸವನ್ನೂ ಮಾಡುತ್ತಿದ್ದಾರೆ. ಇತ್ತೀಚೆಗೆ ಆನ್‌ಲೈನ್ ಶೂಟಿಂಗ್ ಕೂಟದಲ್ಲೂ ಸ್ಪರ್ಧಿಸಿದ್ದರು. ಈ ಎಲ್ಲ ಪಠ್ಯೇತರ ಚಟುವಟಿಕೆಗಳ ಜತೆಗೆ ಓದಿನತ್ತ ಕೂಡ ಗಮನಹರಿಸಿರುವ ಅವರು, ಲಾಕ್‌ಡೌನ್ ಬೆನ್ನಲ್ಲೇ ಶ್ರೀರಾಮ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಪೂರ್ವ ಪರೀಕ್ಷೆಯನ್ನೂ ಬರೆಯಲು ಅವರು ತಯಾರಿ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts