ಕ್ರೀಡೆ

ಹಾರ್ದಿಕ್​ ಅವಮಾನಕ್ಕೆ ಕಾರಣವಾದ ನಾಯಿಗೆ ಹೊಡೆದಿದ್ದಕ್ಕೆ ರೊಚ್ಚಿಗೆದ್ದ ವರುಣ್​ ಧವನ್

ಮುಂಬೈ: ಮಾರ್ಚ್​ 24ರಂದು ಅಹಮದಾಬಾದಿನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್​ ಟೈಟಾನ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದ ವೇಳೆ  ಮೈದಾನದೊಳಗೆ ನುಸುಳಿ ಬಂದ ಶ್ವಾನವೊಂದು ಇಡೀ ಗ್ರೌಂಡ್ ತುಂಬ ಓಡಾಡಿದೆ. ನಾಯಿ ನೋಡುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್​ ಪ್ರೇಮಿಗಳು ಹಾರ್ದಿಕ್​​….ಹಾರ್ದಿಕ್​ ಎಂದು ನಿರಂತರವಾಗಿ ಕೂಗಿದ್ದಾರೆ. ಇದು ನೋಡುಗರಲ್ಲಿ ಬಹಳ ಹಾಸ್ಯ ಮೂಡಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಶ್ವಾನ ಮೈದಾನ ಪ್ರವೇಶಿಸುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಕೂಡಲೇ ಅದನ್ನು ಓಡಿಸಿದ್ದಾರೆ. ಆದರೆ, ನಾಯಿಯನ್ನು ಓಡಿಸುವ ವೇಳೆ ಅದನ್ನು ಸಿಬ್ಬಂದಿ ಕಾಲಿನಿಂದ ಒದಿದ್ದು ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಆದರೆ, ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಹಲವರು ಭದ್ರತಾ ಸಿಬ್ಬಂದಿಯ ನಡೆಗೆ ಕಿಡಿಕಾರಿದ್ದು, ಬಾಲಿವುಡ್​ ನಟ ವರುಣ್​ ಧವನ್​ ಈ ಬಗ್ಗೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವೈರಲ್ ವಿಡಿಯೋದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಅದು ಶ್ವಾನ ಫುಟ್​ಬಾಲ್​ ಅಲ್ಲ. ನಾಯಿ ಸುಖಾಸುಮ್ಮನೆ ಯಾರಿಗೂ ಕಚ್ಚುವುದು ಅಥವಾ ಹಾನಿ ಮಾಡುವುದಿಲ್ಲ. ನಾಯಿಯನ್ನು ಈ ರೀತಿ ಮೈದಾನದಿಂದ ಹೊರ ಓಡಿಸಿದ ಸಿಬ್ಬಂದಿಯ ಕ್ರಮ ಸರಿಯಲ್ಲ ಇಂತಹ ಅಮಾನವೀಯ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಸಹಾಯಕ ಸ್ಥಿತಿಯಲ್ಲಿರುವ ಶ್ವಾನವನ್ನು ಅಟ್ಟಾಡಿಸಿಕೊಂಡು ಒಡೆಯುತ್ತಿರುವುದು ಕಂಡುಬಂದಿದ್ದು, ಪ್ರಾಣಿಹಿಂಸೆಯ ದುರದೃಷ್ಟಕರ ವಾಸ್ತವವನ್ನು ಎತ್ತಿ ತೋರಿಸುತ್ತದೆ. ಮೈದಾನದಲ್ಲಿ ನೆರದಿದ್ದ ಪ್ರೇಕ್ಷಕರು ಇದನ್ನು ಖಂಡಿಸುವ ಬದಲು ಆನಂದಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.