More

    ಬೆಟ್ಟಿಂಗ್​ ವ್ಯಾಮೋಹಕ್ಕೆ ಬಿದ್ದು 1.5 ಕೋಟಿ ರೂ. ಕಳೆದುಕೊಂಡ ಪತಿ; ಕಿರುಕುಳ ತಾಳಲಾರದೆ ಪ್ರಾಣಬಿಟ್ಟ ಪತ್ನಿ

    ಬೆಂಗಳೂರು: ರಂಗು ರಂಗಿನ ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ ಈಗಾಗಲೇ ಆರಂಭಗೊಂಡಿದ್ದು, ಆರು ಪಂದ್ಯಗಳು ಮುಕ್ತಾಯಗೊಂಡಿವೆ. ಮತ್ತೊಂದೆಡೆ ಐಪಿಎಲ್​ನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಹೋಟೆಲ್ ಹಾಗೂ ಲಾಡ್ಜ್​​​ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

    ಇತ್ತ ಐಪಿಎಲ್​ ಶುರುವಾದ ಬೆನ್ನಲ್ಲೇ ಪತಿಯ ಬೆಟ್ಟಿಂಗ್ ಗೀಳಿಗೆ ಪತ್ನಿ ಪ್ರಾಣ ಕಳೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕರೆ ತಾಲ್ಲೂಕಿನಲ್ಲಿ ನಡೆದಿದೆ. ಬೆಟ್ಟಿಂಗ್​ಗಾಗಿ ಹಣ ತೊಡಗಿಸುವ ಸಲುವಾಗಿ ಪತಿ 1.5 ಕೋಟಿಗೂ ಹೆಚ್ಚು ಸಾಲ ಮಾಡಿದ್ದು ಸಾಲ ನೀಡಿದವರು ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಹಿಳೆ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

    ಮೃತರನ್ನು ರಂಜಿತಾ (24) ಎಂದು ಗುರುತಿಸಲಾಗಿದ್ದು, ಈಕೆಯ ಪತಿ ದರ್ಶನ್​ ಬಾಬು ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್​ 19ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

    CTR Betting

    ಇದನ್ನೂ ಓದಿ: ಅಬಕಾರಿ ನೀತಿ ಹಗರಣ| ಕೇಜ್ರಿವಾಲ್​ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರೊಟೆಸ್ಟ್​; ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಆಪ್ ಯತ್ನ

    ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರದುರ್ಗ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ದರ್ಶನ್ ಬಾಬು ಎಂಬವರ ಪತ್ನಿ ರಂಜಿತಾ(24) ಆತ್ಮಹತ್ಯೆಗೆ ಶರಣಾದ ಮಹಿಳೆ. ಹೊಳಲ್ಕೆರೆಯ ಆಕೆಯ ಮನೆಯ ಬೆಡ್ ರೂಂನಲ್ಲಿ ಮಾರ್ಚ್ 19ರಂದು ಆಕೆಯ ಮೃತದೇಹ ಪತ್ತೆಯಾಗಿತ್ತು.

    ತನ್ನ ಈ ನಿರ್ಧಾರಕ್ಕೆ ಸಾಲ ನೀಡಿದ ವ್ಯಕ್ತಿಯೇ ಕಾರಣ ಎಂದು ಆಕೆ ತಿಳಿಸಿದ್ದಾಳೆ. ಪ್ರಕರಣಕ್ಕ ಸಂಬಂಧಿಸಿ ರಂಜಿತಾ ತಂದೆ ವೆಂಕಟೇಶ್ ಎಂಬವರು ತನ್ನ ಅಳಿಯ ದರ್ಶನ್ ಗೆ ಕಾನೂನುಬಾಹಿರವಾಗಿ ಸಾಲ ನೀಡಿರುವ 13 ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಪತಿ ದರ್ಶನ್ ಮತ್ತು ತನಗೆ ಸಾಲ ನೀಡಿದವರು ಬಹಳ ಕಿರುಕುಳ ನೀಡುತ್ತಿದ್ದರು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮೃತ ರಂಜಿತಾ ಎಂದು ಸುಸೈಡ್ ನೋಟಿನಲ್ಲಿ ತಿಳಿಸಿದ್ದಾರೆ. ದಂಪತಿಗೆ 2 ವರ್ಷದ ಪುತ್ರನಿದ್ದಾನೆ.

    ಇನ್ನು ವೆಂಕಟೇಶ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 306 ಅಡಿ 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ  ಶಿವು, ಗಿರೀಶ್ ಮತ್ತು ವೆಂಕಟೇಶ್ ಎಂಬುವವರನ್ನು ಬಂಧಿಸಲಾಗಿದ್ದು, ಉಳಿದವರು ತಲೆಮಾರಿಸಿಕೊಂಡಿದ್ದಾರೆ. ತಲೆಮಾರಿಸಿಕೊಂಡಿರುವವರಿಗೆ ಬಲೆ ಬೀಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಚಿತ್ರದುರ್ಗ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts