Virat Kohli: ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಅಂಕಪಟ್ಟಿಯ ಟಾಪ್ 4ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಇದೇ ಸಂದರ್ಭದಲ್ಲಿ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ಗೆ ಟಕ್ಕರ್ ಕೊಟ್ಟ ಕೊಹ್ಲಿ, ಈ ಹಿಂದೆ ಅಯ್ಯರ್ ಬೆಂಗಳೂರು ಮೈದಾನದಲ್ಲಿ ನಡೆದುಕೊಂಡಿದ್ದ ರೀತಿಯನ್ನು ಪಂಜಾಬ್ ನೆಲದಲ್ಲಿ ನೆನಪಿಸಿ, ಉತ್ತರಿಸಿದರು. ಇದು ಆರ್ಸಿಬಿ ಫ್ಯಾನ್ಸ್ಗಳಿಗೆ ಖುಷಿ ನೀಡಿದ್ದೇ ಆದರೂ ಶ್ರೇಯಸ್ ಬೇಸರಕ್ಕೆ ಕಾರಣವಾಯಿತು.
ಇದನ್ನೂ ಓದಿ: ಸತತ 3 ಸೋಲುಗಳ ಬಳಿಕ ತವರು ಮೈದಾನದಲ್ಲಿ RCBಗೆ ಮೊದಲ ಗೆಲುವು: ವಿರಾಟ್ ಕೊಹ್ಲಿ ಹೇಳಿಕೆ ವೈರಲ್! Virat Kohli
ಇನ್ನು ನಿನ್ನೆಯ ಪಂದ್ಯದಲ್ಲಿ ಆರ್ಆರ್ ವಿರುದ್ಧ 11 ರನ್ಗಳ ರೋಚಕ ಜಯ ಸಾಧಿಸಿದ ಕಿಂಗ್ ಕೊಹ್ಲಿ ಪಡೆ, ರಾಜಸ್ಥಾನ ರಾಯಲ್ಸ್ಗೆ ದುಃಸ್ವಪ್ನವಾಗಿ ಕಾಡಿತು. ಈ ಗೆಲುವಿನ ಮೂಲಕ ತವರಿನಲ್ಲಿ ಸತತ ಸೋಲು ಎಂಬ ಪಟ್ಟಿಗೆ ಕಡೆಗೂ ಮುಕ್ತಿ ಹಾಡಿತು. ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆಡಿದ್ದ ಆರ್ಸಿಬಿ, ಕನ್ನಡಿಗ ಕೆ.ಎಲ್. ರಾಹುಲ್ ಆರ್ಭಟಕ್ಕೆ ತತ್ತರಿಸಿತ್ತು. ಪಂದ್ಯ ಗೆದ್ದ ಖುಷಿಯಲ್ಲಿ 'ಇದು ನನ್ನ ನೆಲ, ನನ್ನ ತವರು. ಇತರರಿಗಿಂತ ಇಲ್ಲಿನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ' ಎಂದು 'ಕಾಂತಾರ' ಚಿತ್ರದ ಕ್ಲೈಮ್ಯಾಕ್ಸ್ ನೆನಪಿಸಿದ ಕೆ.ಎಲ್. ರಾಹುಲ್, ತಮ್ಮ ಬ್ಯಾಟ್ನಿಂದ ವೃತ್ತಾಕಾರ ಬರೆದು, ಇದು ನನ್ನದು ಎಂಬ ಸಂದೇಶವನ್ನು ಸಾರಿದ್ದರು.
ಕೆ.ಎಲ್. ರಾಹುಲ್ ಗೆಲುವಿನ ಸಂಭ್ರಮದಲ್ಲಿ ಮಾಡಿದ ದೃಶ್ಯ ಆರ್ಸಿಬಿ ಅಭಿಮಾನಿಗಳನ್ನು ತೀವ್ರ ಕೆರಳಿಸಿತು. ಒಂದಷ್ಟು ಫ್ಯಾನ್ಸ್, ಎಂದಿನಂತೆ ತಮ್ಮನ್ನು ಕೆಣಕಿದವರಿಗೆ ಉತ್ತರಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಕೊಹ್ಲಿಗೆ, ದೆಹಲಿಯಲ್ಲಿ ಕೆ.ಎಲ್. ರಾಹುಲ್ ತಂಡದ ವಿರುದ್ಧ ಗೆದ್ದು, ತಮ್ಮ ಶೈಲಿಯಲ್ಲಿ ಉತ್ತರಿಸಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಅಂತೆಯೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವರುಣ್ ಆರೋನ್ ಕೂಡ ಇದೇ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ.
ಇದನ್ನೂ ಓದಿ: ಅಪ್ಪ, ಅಮ್ಮ ನೀವೇ… ಕನ್ನಡಿ ಮೇಲೆ ಕಾರಣ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸಾಫ್ಟ್ವೇರ್ ಟೆಕ್ಕಿ | Suicide Case
"ಡೆಲ್ಲಿ ಕ್ಯಾಪಿಟಲ್ಸ್ ತವರಾದ ದೆಹಲಿಯ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ 'ಇದು ನನ್ನ ನೆಲ, ನನ್ನ ತವರು, ಇತರರಿಗಿಂತ ಇಲ್ಲಿನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ' ಎಂದು ವಿರಾಟ್ ಕೊಹ್ಲಿ ಹೇಳುವುದನ್ನು ನೋಡಬೇಕು. ಮುಂಬರುವ ಪಂದ್ಯದಲ್ಲಿ ಕೊಹ್ಲಿ ಈ ಮಾತು ಹೇಳ್ತಾರೆ ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ" ಎಂದಿದ್ದಾರೆ ವರುಣ್,(ಏಜೆನ್ಸೀಸ್).