ಕ್ರೀಡೆ

ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ: IPL ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲಿಗ! Vaibhav suryavanshi

Vaibhav suryavanshi : ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಒಂದೇ ಸೀಸನ್​ನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ vs ಆರ್‌ಆರ್) ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ, ಐಪಿಎಲ್-2025 ಮೆಗಾ ಹರಾಜಿನಲ್ಲಿ 1.10 ಕೋಟಿ ರೂ.ಗೆ ಖರೀದಿಸಿತು. ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಗಾಯಗೊಂಡ ಕಾರಣ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ವೈಭವ್‌ಗೆ ಚೊಚ್ಚಲ ಪ್ರವೇಶ ಮಾಡುವ ಅವಕಾಶ ಸಿಕ್ಕಿತು.

ತಮ್ಮ ಚೊಚ್ಚಲ ಪಂದ್ಯದಲ್ಲೇ 20 ಎಸೆತಗಳಲ್ಲಿ 34 ರನ್‌ಗಳ ವಿನಾಶಕಾರಿ ಆಟ ಪ್ರದರ್ಶಿಸಿ, ತಮ್ಮ ಪ್ರಭಾವ ಬೀರಿದ ಹದಿನಾಲ್ಕು ವರ್ಷದ ವೈಭವ್, ನಂತರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕದೊಂದಿಗೆ ತಮ್ಮ ಸಾಮರ್ಥ್ಯ ಏನೆಂಬುದನ್ನು ಪ್ರದರ್ಶಿಸಿದರು. ಈ ಪಂದ್ಯಲ್ಲಿ ಕೇವಲ 38 ಎಸೆತಗಳಲ್ಲಿ 101 ರನ್ ಗಳಿಸಿದರು. ಐಪಿಎಲ್​ ಇತಿಹಾಸದಲ್ಲಿಯೇ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ವೈಭವ್, ಪಂಜಾಬ್ ಕಿಂಗ್ಸ್ ವಿರುದ್ಧ 15 ಎಸೆತಗಳಲ್ಲಿ 40 ರನ್ ಗಳಿಸಿದರು.

ಇತ್ತೀಚೆಗೆ ಸಿಎಸ್‌ಕೆ ತಂಡದ ವಿರುದ್ಧ ರಾಜಸ್ಥಾನದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೈಭವ್​, 33 ಎಸೆತಗಳಲ್ಲಿ 57 ರನ್ ಗಳಿಸಿದರು. ಒಟ್ಟಾರೆಯಾಗಿ, ವೈಭವ್ ಸೂರ್ಯವಂಶಿ ಈ ಋತುವಿನಲ್ಲಿ ಏಳು ಪಂದ್ಯಗಳನ್ನು ಆಡಿದ್ದಾರೆ ಮತ್ತು ಒಂದು ಶತಕ ಮತ್ತು ಅರ್ಧಶತಕದ ಸಹಾಯದಿಂದ 252 ರನ್ ಗಳಿಸಿದ್ದಾರೆ. ಇದರೊಂದಿಗೆ, ವೈಭವ್ ಐಪಿಎಲ್‌ನ ಒಂದೇ ಋತುವಿನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ಮುರಿಯಲಾಗದ ದಾಖಲೆಯನ್ನು ಬರೆದಿದ್ದಾರೆ.

18 ವರ್ಷ ತುಂಬುವ ಮೊದಲು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರು

* ವೈಭವ್ ಸೂರ್ಯವಂಶಿ - ಒಟ್ಟು ರನ್‌ಗಳು- 252 (ಎರಡು ಐವತ್ತು ಪ್ಲಸ್ ಸ್ಕೋರ್‌ಗಳು)

* ಆಯುಷ್ ಮಾತ್ರೆ- ಒಟ್ಟು ರನ್‌ಗಳು- 206 (ಒಂದು ಐವತ್ತು ಪ್ಲಸ್ ಸ್ಕೋರ್)

* ರಿಯಾನ್ ಪರಾಗ್- ಒಟ್ಟು ರನ್‌ಗಳು- 160 (ಒಂದು ಐವತ್ತು ಪ್ಲಸ್ ಸ್ಕೋರ್)

* ಸರ್ಫರಾಜ್ ಖಾನ್- ಒಟ್ಟು ರನ್‌ಗಳು- 111 (ಐವತ್ತು ಪ್ಲಸ್ ಸ್ಕೋರ್-0)

* ಅಭಿಷೇಕ್ ಶರ್ಮಾ- 63 (ಐವತ್ತು ಪ್ಲಸ್ ಸ್ಕೋರ್-0)