ಕಿಂಗ್ಸ್ಟನ್(ಜಮೈಕಾ): ಅಥ್ಲೆಟಿಕ್ಸ್ ದಿಗ್ಗಜ ಉಸೇನ್ ಬೋಲ್ಟ್ ಮೊದಲ ಬಾರಿ ಅಪ್ಪನಾಗಿದ್ದಾರೆ. ಜಮೈಕಾದ ಸ್ಪ್ರಿಂಟ್ ತಾರೆ ಬೋಲ್ಟ್ ಅವರ ಗೆಳತಿ ಕಸಿ ಬೆನ್ನೆಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಜಮೈಕಾದ ಪ್ರಧಾನಿ ಆಂಡ್ರ್ಯೋ ಹೋಲ್ನೆಸ್, ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ 33 ವರ್ಷದ ಬೋಲ್ಟ್ ತಂದೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಬೋಲ್ಟ್ ದಂಪತಿಗೆ ಭಾನುವಾರವೇ ಮಗು ಜನಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
8 ಒಲಿಂಪಿಕ್ಸ್ ಸ್ವರ್ಣ ಪದಕಗಳ ಒಡೆಯ ಬೋಲ್ಟ್, ಬೆನ್ನೆಟ್ ತಾಯಿಯಾಗುತ್ತಿರುವ ವಿಷಯವನ್ನು ಕಳೆದ ಮಾರ್ಚ್ನಲ್ಲೇ ಪ್ರಕಟಿಸಿದ್ದರು. 100 ಮತ್ತು 200 ಮೀಟರ್ ಓಟದಲ್ಲಿ ಬೋಲ್ಟ್ ವಿಶ್ವದಾಖಲೆ ಹೊಂದಿದ್ದು, ದಶಕದ ಕಾಲದ ಪ್ರಾಬಲ್ಯದ ಬಳಿಕ 2017ರಲ್ಲಿ ಅಥ್ಲೆಟಿಕ್ಸ್ನಿಂದ ನಿವೃತ್ತರಾಗಿದ್ದರು.