ಕ್ರೀಡೆ

ರಾಷ್ಟ್ರೀಯ ಪ್ಯಾರಾ ಬೋಶಿಯನ್​ಗೆ ಜನವರಿ 26ರಂದು ರಾಜ್ಯದ ಕ್ರೀಡಾಪಟುಗಳ ಆಯ್ಕೆ ಟ್ರಯಲ್ಸ್​​

ಬೆಂಗಳೂರು: ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಫೆಬ್ರವರಿ 7ರಿಂದ 12ರವರೆಗೆ ನಡೆಯಲಿರುವ 8ನೇ ಆವೃತ್ತಿಯ ರಾಷ್ಟ್ರೀಯ ಪ್ಯಾರಾ ಬೋಶಿಯನ್​ ಚಾಂಪಿಯನ್​ಷಿಪ್​ ನಡೆಯಲಿದ್ದು, ರಾಜ್ಯದ ಕ್ರೀಡಾಪಟುಗಳ ಆಯ್ಕೆ ಟ್ರಯಲ್ಸ್​ ಆಯೋಜಿಸಲಾಗಿದೆ.

ರಾಜ್ಯ ಅಂಗವಿಕಲರ ಸಂಸ್ಥೆ ಹಾಗೂ ಪ್ಯಾರಾ ಬೋಶಿಯಾ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ಜನವರಿ 26ರಂದು ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೋಶಿಯಾ ಇಂಡಿಯಾ ನಿಯಮಾನುಸಾರ ಪ್ರಕ್ರಿಯೆ ನಡೆಯಲಿದೆ.