ಬೆಂಗಳೂರು: ಫೆಬ್ರವರಿ 23ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮಹಿಳಾ ಟಿ20 ಟೂರ್ನಿಯ ಆರಂಭಿಕ 11 ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆ ಶನಿವಾರ ಆರಂಭಗೊಂಡಿದೆ.
ಬುಕ್ಮೈಶೋ ವೆಬ್ಸೈಟ್ನಲ್ಲಿ ಟಿಕೆಟ್ಗಳು ಲಭ್ಯವಿದ್ದು, 100 ರೂ. ಮುಖಬೆಲೆ ಹೊಂದಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಹಾಲಿ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ.
ಆತಿಥೇಯ ಆರ್ಸಿಬಿ ಮಹಿಳಾ ತಂಡ ಫೆಬ್ರವರಿ 4ರಂದು ಯುಪಿ ವಾರಿಯರ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಮಾರ್ಚ್ 4ರವರೆಗೆ ಬೆಂಗಳೂರಿನಲ್ಲಿ ಪ್ರತಿದಿನ ರಾತ್ರಿ 7.30ರಿಂದ ತಲಾ 1 ಪಂದ್ಯ ನಡೆಯಲಿದೆ.