ಕ್ರೀಡೆ

ಪಾಕ್​ ವಿರುದ್ಧ ರೋಚಕ ಜಯ ಗಳಿಸಿದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಮೆಲ್ಬೋರ್ನ್: ಟಿ20 ವಿಶ್ವಕಪ್​ 2022ರ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ರೋಚಕ ಜಯ ಗಳಿಸಿದ್ದು, ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿರುವ ಭಾರತೀಯರು ಕೂಡ ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.

ಮತ್ತೊಂದೆಡೆ ಪಾಕ್​ ವಿರುದ್ಧದ ಈ ಅಮೋಘ ವಿಜಯದ ಬಳಿಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು, ಈ ಪಂದ್ಯದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್​ಗಳಲ್ಲೊಂದು. ಈ ಪಂದ್ಯದ ಗಾತ್ರ ವಿಶಿಷ್ಟವಾದುದು. ಇಂಥ ಒಂದು ಪಂದ್ಯದಲ್ಲಿ ಆಟ ಆಡಿದ್ದು ನನ್ನ ಅದೃಷ್ಟ. ಬಹುಶಃ ಈಗ ಜನರು ದೀಪಾವಳಿ ಹಬ್ಬವನ್ನು ಸಂಭ್ರಮಿಸಬಹುದು ಎಂದ ವಿರಾಟ್, ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ.

ಭಾರತ ತಂಡ ಪಾಕ್​ ವಿರುದ್ಧ 160 ರನ್​ಗಳ ಗುರಿಯನ್ನು 4 ವಿಕೆಟ್​ಗಳ ಅಂತರದಲ್ಲಿ ತಲುಪಿ ಗೆಲುವನ್ನು ಸಾಧಿಸಿದೆ. ಭಾರತಕ್ಕೆ ಗೆಲುವು ಕಠಿಣವಾಗಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದರು. ಅಜೇಯ 82 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.