Retirement :ಬಾಂಗ್ಲದೇಶ ತಂಡದ ಅನುಭವಿ, ವಿಕೇಟ್ ಕೀಪರ್ ಮುಷ್ಫಿಕರ್ ರಹೀಮ್(mustafizur rahim)ಏಕದಿನ ಅಂತರಾಷ್ಟ್ರೀಯ ಕಿಕ್ರೆಟ್ಗೆ ವಿದಾಯ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಬಾಂಗ್ಲಾದೇಶ ಟೀಮ್ ಹೊರಬಿದ್ದ ಸುಮಾರು ಒಂದು ವಾರದ ನಂತರ ಈ ಘೋಷಣೆ ಹೊರಬಿದ್ದಿದೆ. ಅಲ್ಲದೆ, ಆ ಪಂದ್ಯದಲ್ಲಿ ರಹೀಮ್ ಕೂಡ ತಂಡದಲ್ಲಿದ್ದರು. ಮೂರು ಪಂದ್ಯಗಳನ್ನು ಆಡಿದ ಬಾಂಗ್ಲಾ ಟೀಮ್, ಎರಡು ಪಂದ್ಯಗಳಲ್ಲಿ ಸೋತು, ಪಾಕಿಸ್ತಾನ ವಿರುದ್ಧದ ಅವರ ಕೊನೆಯ ಪಂದ್ಯ ರಾವಲ್ಪಿಂಡಿಯಲ್ಲಿ ಮಳೆಯಿಂದ ರದ್ದಾಗಿತ್ತು. ಹೀಗಾಗಿ, ಬಾಂಗ್ಲಾ ತನ್ನ ಗುಂಪಿನಲ್ಲಿ ಯಾವುದೇ ಗೆಲುವು ಕಂಡಿರಲಿಲ್ಲ.
ಇನ್ನು ಏಕದಿನ ನಿವೃತ್ತಿಯನ್ನು ಮುಷ್ಫಿಕರ್ ರಹೀಮ್, ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ವಿದಾಯದ ಬಗ್ಗೆ ಮಾತನಾಡಿರುವ ವಿಕೇಟ್ ಕೀಪರ್, ''ಇಂದಿನಿಂದ ನನ್ನ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಮ್ಮ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಸೀಮಿತವಾಗಿರಬಹುದು. ಆದರೆ, ಒಂದು ವಿಷಯ ನಿಶ್ಚಿತ: ನಾನು ನನ್ನ ದೇಶಕ್ಕಾಗಿ ಮೈದಾನಕ್ಕೆ ಬಂದಾಗಲೆಲ್ಲಾ, ನಾನು 100% ಕ್ಕಿಂತ ಹೆಚ್ಚು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನೀಡಿದ್ದೇನೆ.''
''ಕಳೆದ ಕೆಲವು ವಾರಗಳು ನನಗೆ ತುಂಬಾ ಸವಾಲಿನದ್ದಾಗಿವೆ, ಮತ್ತು ಇದು ನನ್ನ ಹಣೆಬರಹ ಎಂದು ನಾನು ಅರಿತುಕೊಂಡಿದ್ದೇನೆ'' ಎಂದು ಭಾವುಕ ವಿದಾಯ ಹೇಳಿದ್ದಾರೆ.
ಇನ್ನು ಕೊನೆಯದಾಗಿ, ಕಳೆದ 19 ವರ್ಷಗಳಿಂದ ನಾನು ಕ್ರಿಕೆಟ್ ವೃತ್ತಿಯಲ್ಲಿದ್ದು, ಇಲ್ಲಿಯವರಿಗೆ ಸಹಕರಿಸಿದ ಕುಟುಂಬ, ಗೆಳೆಯರು ಮತ್ತು ಫ್ಯಾನ್ಸ್ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್)