Harbhajan Singh: ನಿನ್ನೆ (ಏ.15) ಪಂಜಾಬ್ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ನಡುವಿನ ರೋಚಕ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 16 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ರೋಚಕ ಜಯ ಎಂಬುದು ಗಮನಾರ್ಹ.
ಇದನ್ನೂ ಓದಿ: ಇಂಜೆಕ್ಷನ್ ಮಹಿಮೆಯಂತೆ! ತನ್ನ ಸೌಂದರ್ಯ ರಹಸ್ಯ ಕೆದಕಿದ ನೆಟ್ಟಿಗನಿಗೆ ಖುಷ್ಬೂ ಕೊಟ್ಟ ತಿರುಗೇಟು ಹೀಗಿತ್ತು… Khushbu Sundar
ಇನ್ನು ಈ ಪಂದ್ಯದಲ್ಲಿ ಪಂಜಾಬ್ ಬೌಲರ್ಗಳು ಮಾಡಿದ ಕಮಾಲ್ಗೆ ಮೈದಾನದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಫಿದಾ ಆದರು. ಕಳೆದ ಪಂದ್ಯಗಳಲ್ಲಿ ಸತತ ಫ್ಲಾಪ್ ಪ್ರದರ್ಶನ ನೀಡುತ ಎಲ್ಲರ ನೆನಪಿನಿಂದ ದೂರ ಉಳಿದಿದ್ದ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಲ್, ಬ್ಯಾಕ್ ಟು ಬ್ಯಾಕ್ ಕೆಕೆಆರ್ನ ದೈತ್ಯ ಬ್ಯಾಟರ್ಗಳ ವಿಕೆಟ್ ಕಬಳಿಸುವ ಮೂಲಕ ಗೆಲುವಿನ ಲಯವನ್ನು ತಮ್ಮ ತಂಡಕ್ಕೆ ತಂದರು. ಬರೋಬ್ಬರಿ 4 ವಿಕೆಟ್ ಪಡೆದ ಚಹಲ್, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
"ಅವನ ಕರಿಯರ್ನಲ್ಲಿ ಇದು ಅತ್ಯುತ್ತಮ ಬೌಲಿಂಗ್. ಸಾಧಾರಣ ಗುರಿಯನ್ನು ಚೇಸ್ ಮಾಡುವ ಅವಕಾಶ ಕೆಕೆಆರ್ಗೆ ಸಿಕ್ಕಿತು. ಆದರೆ, ವಿಫಲವಾಗಿದ್ದು ದುರಂತ. ಈ ಟೂರ್ನಿಯಲ್ಲಿ ಚಹಲ್ ಮಿಂಚಲು ತೀರ ಪರದಾಡುತ್ತಿದ್ದರು. ನಿನ್ನೆಯ ಪಂದ್ಯದಲ್ಲಿ ಉತ್ತಮ ಸ್ಪಿನ್ ದಾಳಿಯನ್ನು ನಡೆಸಿ, ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಅಜಿಂಕ್ಯ ರಹಾನೆ ಅವರ ವಿಕೆಟ್ ಪಡೆದ ಕ್ಷಣದಿಂದಲೇ ಗೆಲುವಿನ ಪತಾಕೆ ಪಂಜಾಬ್ ಕಡೆಗೆ ವಾಲಿತು. ಚಹಲ್ರನ್ನು ಬಹುತೇಕರು ಮರೆತುಹೋಗಿದ್ದಾರೆ. ಆದರೆ, ನಿನ್ನೆಯ ಪಂದ್ಯದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ" ಎಂದು ಹರ್ಭಜನ್ ಸಿಂಗ್ ಹೇಳಿದರು,(ಏಜೆನ್ಸೀಸ್).