ಕ್ರೀಡೆ

ಫಸ್ಟ್​ ಟಾಸ್, ವಿಕೆಟ್​, ಸಿಕ್ಸರ್​, ಶತಕ... ಐಪಿಎಲ್​ನ ಮೊದಲುಗಳಿವು! ಇಲ್ಲಿದೆ ನೋಡಿ ನಿಮಗೆ ಗೊತ್ತಿರದ​ ಮಾಹಿತಿ | IPL 2025

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಗ್ಗೆ ಹೇಳಲು ವಿಶೇಷ ಏನೂ ಇಲ್ಲ ಎಂದೇ ಹೇಳಬಹುದು. ಐಪಿಎಲ್​ ನೋಡುವುದು ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿ ಹಬ್ಬವಿದ್ದಂತೆ. ಈ ಟಿ20 ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಮಾರ್ಚ್​-ಏಪ್ರಿಲ್​ ತಿಂಗಳಿಗಾಗಿ ತೀವ್ರ ಕಾತರ ವ್ಯಕ್ತಪಡಿಸುವ ಫ್ಯಾನ್ಸ್, ಇಂದು ನಡೆಯಲಿರುವ ಆರ್​ಸಿಬಿ ಮತ್ತು ಕೆಕೆಆರ್ ನಡುವಿನ 2025ರ ಮೊದಲ ಶುಭಾರಂಭ ಪಂದ್ಯಕ್ಕಾಗಿ ಕಾಯತೊಡಗಿದ್ದಾರೆ. ಈ ಪಂದ್ಯದ ಮೂಲಕ 2025ರ ಐಪಿಎಲ್​ಗೆ ಅದ್ಧೂರಿ ಚಾಲನೆ ಸಿಗಲಿದೆ.

ಐಪಿಎಲ್ ಇತಿಹಾಸದಲ್ಲಿ ಹಲವು ಮರೆಯಲಾಗದ ಘಟನೆಗಳು ನಡೆದಿದ್ದು, ಸ್ಟಾರ್​ ಹಾಗೂ ಯುವ ಆಟಗಾರರ ದಾಖಲೆಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿದೆ. 2008ರಿಂದ ಆರಂಭಗೊಂಡ ಐಪಿಎಲ್​ ಇದೀಗ 18ನೇ ಆವೃತ್ತಿಗೆ ಕಾಲಿಟ್ಟಿದೆ. ಯಾವ ವರ್ಷದಲ್ಲಿ ಐಪಿಎಲ್ ಶುರುವಾಯಿತೋ, ಅದೇ ವರ್ಷದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಯಾವ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತ್ತೋ ಅದೇ ತಂಡಗಳು 2025ರ ಐಪಿಎಲ್​ನಲ್ಲಿಯೂ ಎದುರು-ಬದುರು ಆಡುತ್ತಿರುವುದು ವಿಶೇಷ. ಇದು ಹಲವರ ಕುತೂಹಕ್ಕೂ ಕಾರಣವಾಗಿದೆ.

ಅಸಲಿಗೆ ಐಪಿಎಲ್​ನಲ್ಲಿ ಮೊದಲಿಗೆ ಟಾಸ್​ ಗೆದ್ದವರು ಯಾರು? ಮೊದಲ ಬೌಂಡರಿ, ಸಿಕ್ಸರ್​, ವಿಕೆಟ್​, ಅರ್ಧಶತಕ, ಶತಕ ಗಳಿಸಿದವರು ಯಾರು? ಎಂಬ ಹತ್ತು ಹಲವು ಮೊದಲುಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಐಪಿಎಲ್​ನ ಮೊದಲುಗಳಿವು

ಮೊದಲ ಟಾಸ್: ಅಂದಿನ ಆರ್‌ಸಿಬಿ ಕ್ಯಾಪ್ಟನ್​ ರಾಹುಲ್ ದ್ರಾವಿಡ್

ಮೊದಲ ಎಸೆತ: ಪ್ರವೀಣ್ ಕುಮಾರ್ (ಆರ್‌ಸಿಬಿ)

ಮೊದಲ ಬೌಂಡರಿ: ಬ್ರೆಂಡನ್ ಮೆಕಲಮ್

ಮೊದಲ ಸಿಕ್ಸರ್​: ಬ್ರೆಂಡನ್ ಮೆಕಲಮ್

ಮೊದಲ ವಿಕೆಟ್: ಸೌರವ್ ಗಂಗೂಲಿ

ಮೊದಲ ಅರ್ಧಶತಕ: ಬ್ರೆಂಡನ್ ಮೆಕಲಮ್

ಮೊದಲ ಶತಕ: ಬ್ರೆಂಡನ್ ಮೆಕಲಮ್ (158)

ಮೊದಲ ಗೆಲುವು: ಕೆಕೆಆರ್

ಮೊದಲ ಪ್ಲೇಯರ್​ ಆಫ್​ ದಿ ಮ್ಯಾಚ್​: ಬ್ರೆಂಡನ್ ಮೆಕಲಮ್

ಶತಕ ಗಳಿಸಿದ ಮೊದಲ ಭಾರತೀಯ: ಮನೀಶ್ ಪಾಂಡೆ (ಆರ್‌ಸಿಬಿ) vs ಡೆಕ್ಕನ್ ಚಾರ್ಜರ್ಸ್ (2009) ಪಂದ್ಯ

ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ: ಲಕ್ಷ್ಮಿಪತಿ ಬಾಲಾಜಿ (ಸಿಎಸ್‌ಕೆ) vs ಪಂಜಾಬ್ ಕಿಂಗ್ಸ್ (2008)

5 ವಿಕೆಟ್ ಪಡೆದ ಮೊದಲ ಆಟಗಾರ: ಸೊಹೈಲ್ ತನ್ವೀರ್ (ರಾಜಸ್ಥಾನ ರಾಯಲ್ಸ್) vs ಸಿಎಸ್‌ಕೆ (2008)

ಮೊದಲ ಐಪಿಎಲ್ ಚಾಂಪಿಯನ್: ರಾಜಸ್ಥಾನ ರಾಯಲ್ಸ್ (2008)

ಮೊದಲ ಪರ್ಪಲ್ ಕ್ಯಾಪ್ ವಿಜೇತ: ಸೊಹೈಲ್ ತನ್ವೀರ್ (ರಾಜಸ್ಥಾನ ರಾಯಲ್ಸ್) - 22 ವಿಕೆಟ್‌

ಮೊದಲ ಆರೆಂಜ್ ಕ್ಯಾಪ್ ವಿಜೇತ: ಶಾನ್ ಮಾರ್ಷ್ (ಕಿಂಗ್ಸ್​ ಇಲೆವೆನ್ ಪಂಜಾಬ್) - 616 ರನ್‌

ಇದನ್ನೂ ಓದಿ: Karnataka Bandh | ಬಾಗಲಕೋಟೆಯಲ್ಲಿ ಕರವೇ ಶಿವರಾಮೇಗೌಡ ಬಣದಿಂದ ಮಾತ್ರ ಬಂದ್​​ಗೆ ಬೆಂಬಲ200 ಅಧಿಕ ರನ್‌ ಗಳಿಸಿದ ತಂಡ: ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ರನ್ ಔಟ್: ಆಶ್ಲೇ ನಾಫ್ಕೆ (ಆರ್‌ಸಿಬಿ)

ಮೊದಲ ಸ್ಟಂಪಿಂಗ್: ಮಾರ್ಕ್ ಬೌಚರ್ (ಆರ್‌ಸಿಬಿ)

ಮೊದಲ ಇಂಪ್ಯಾಕ್ಟ್ ಪ್ಲೇಯರ್: ತುಷಾರ್ ದೇಶಪಾಂಡೆ (ಸಿಎಸ್‌ಕೆ)

ಮೊದಲ ಉದಯೋನ್ಮುಖ ಪ್ಲೇಯರ್ ಪ್ರಶಸ್ತಿ: ಶ್ರೀವತ್ಸ್ ಗೋಸ್ವಾಮಿ (ಆರ್‌ಸಿಬಿ), (ಏಜೆನ್ಸೀಸ್).