ಕ್ರೀಡೆ

ಟಿ20 ವಿಶ್ವಕಪ್​ನಲ್ಲಿ ಇವರೆಲ್ಲಾ ಮಾಡಲಿದ್ದಾರಾ ಕಮಾಲ್​? ಈ 7​ ಬೌಲರ್​ಗಳ ಮೇಲೆ ಮಾಜಿ ಕ್ರಿಕೆಟಿಗರ ಕಣ್ಣು​

ನವದೆಹಲಿ: ಪ್ರಸಕ್ತ ಟಿ20 ವಿಶ್ವಕಪ್​ ಪಂದ್ಯಾವಳಿಗಳು ವೆಸ್ಟ್​ ಇಂಡೀಸ್​ ಮತ್ತು ಅಮೆರಿಕಾದಲ್ಲಿ ನಡೆಯಲಿದ್ದು, ಜೂನ್​ 01ರಿಂದಲೇ ಅಧಿಕೃತ ಚಾಲನೆ ಪಡೆದುಕೊಂಡಿದೆ. ಭರ್ಜರಿ ಪೈಪೋಟಿ ಕೊಡಲು 20 ಬಲಿಷ್ಠ ತಂಡಗಳು ಸಜ್ಜಾಗಿವೆ. ಜೂನ್ 05ರಂದು ನಡೆಯಲಿರುವ ಐರ್ಲೆಂಡ್​ ವಿರುದ್ಧದ ಮೊದಲ ಪಂದ್ಯಕ್ಕೆ ಈಗಾಗಲೇ ಟೀಂ ಇಂಡಿಯಾ ಸನ್ನದ್ಧಗೊಂಡಿದ್ದೇ ಆದರೂ ಜೂ.09ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಮಾತ್ರ ಇದೀಗ ಹೆಚ್ಚಿನ ಆತುರ-ಕಾತರ ಶುರುವಾಗಿದೆ.

ಇನ್ನು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೇರಿದಂತೆ ಆಯಾ ತಂಡಗಳ ಸ್ಟಾರ್​ ಬ್ಯಾಟ್ಸ್​ಮನ್​ಗಳ ಬಗ್ಗೆ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತರೆ ಟಾಪ್ ಬ್ಯಾಟ್ಸ್​ಮನ್​ಗಳನ್ನು ಹಿಂದಿಕ್ಕಿ, ಹೊಸ ದಾಖಲೆಗಳನ್ನು ಬರೆಯುವುದು ಪಕ್ಕಾ ಎಂದು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದರು. ಇದೀಗ ಬೌಲರ್​ಗಳ ಸರದಿ.

ಐಸಿಸಿ ಟಿ20 ವಿಶ್ವಕಪ್​​ ಪಂದ್ಯಾವಳಿಯಲ್ಲಿ ಈ ಏಳು ಬೌಲರ್​ಗಳು ಎದುರಾಳಿಗಳ ಬೆವರಿಳಿಸುವುದರ ಜತೆಗೆ ತಂಡದ ಗೆಲುವಿಗೆ ಆಸರೆಯಾಗಲಿದ್ದಾರೆ ಎಂದು ಕ್ರಿಕೆಟ್ ಲೋಕದ ಮಾಜಿ ಹಿರಿಯ ಆಟಗಾರರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ, ಇಡೀ ಮ್ಯಾಚ್​ನ ಲೆಕ್ಕಾಚಾರಗಳನ್ನು ಬದಲಿಸುವ ಸಾಮರ್ಥ್ಯವಿರುವ ಸ್ಟಾರ್​ ಬೌಲರ್​ಗಳು ಯಾರೆಲ್ಲಾ ಎಂಬುದರ ಪಟ್ಟಿ ಹೀಗಿದೆ ಗಮನಿಸಿ.

1. ಜಸ್ಪ್ರೀತ್ ಬುಮ್ರಾ (ಭಾರತ)

2. ಮೊಹಮ್ಮದ್ ಅಮೀರ್ (ಪಾಕಿಸ್ತಾನ)

3. ಮಥೀಶ ಪತಿರಾನ (ಶ್ರೀಲಂಕಾ)

4. ಜೋಫ್ರಾ ಆರ್ಚರ್ (ಇಂಗ್ಲೆಂಡ್​)

5. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್​)

6. ರಶೀದ್ ಖಾನ್ (ಆಫ್ಘಾನಿಸ್ತಾನ)

7. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)