ಕ್ರೀಡೆ

ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಚಾಂಪಿಯನ್​ ಬೌಲರ್​ಗಳಿಲ್ಲ!

ಬೆಂಗಳೂರು: ಮಿನಿ ವಿಶ್ವಕಪ್​ ಖ್ಯಾತಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ವೇದಿಕೆ ಸಜ್ಜಾಗಿದೆ. ಏಕದಿನ ಕ್ರಿಕೆಟ್​ ಪ್ರಕಾರದ ಈ ಟೂರ್ನಿಗೆ ಎಲ್ಲ ತಂಡಗಳು ಪೂರ್ವಸಿದ್ಧತೆಯಲ್ಲಿ ತೊಡಗಿಕೊಂಡಿರುವ ನಡುವೆ ಗಾಯ ಮತ್ತು ಇತರ ಕಾರಣಗಳಿಂದಾಗಿ ಕೆಲ ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ. ಇದರಲ್ಲಿ ಸ್ಟಾರ್​ ಬೌಲರ್​ಗಳೇ ಹೆಚ್ಚಿರುವುದು ಕಳವಳಕಾರಿ ಎನಿಸಿದೆ. ಇದರಿಂದಾಗಿ ಚಾಂಪಿಯನ್ಸ್​ ಟ್ರೋಫಿ ಚಾಂಪಿಯನ್​ ಬೌಲರ್​ಗಳಿಲ್ಲದ ಟೂರ್ನಿಯಂತಾಗುವ ಭೀತಿ ಎದುರಾಗಿದೆ. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಸದ್ಯ ಬ್ಯಾಟರ್​ಗಳ ಆರ್ಭಟ ಹೆಚ್ಚಾಗಿರುವ ನಡುವೆ, ಚಾಂಪಿಯನ್ಸ್​ ಟ್ರೋಫಿಯಲ್ಲಿ ಇನ್ನಷ್ಟು ಹೆಚ್ಚಿನ ರನ್​ಮಳೆ ಹರಿಯುವ ನಿರೀಕ್ಷೆಯೂ ಮೂಡಿದೆ. ಫಾರ್ಮ್​ನಲ್ಲಿಲ್ಲದ ವಿಶ್ವದ ಕೆಲ ಪ್ರಮುಖ ಬ್ಯಾಟರ್​ಗಳಿಗೆ ಲಯ ಕಂಡುಕೊಳ್ಳಲು ಕೂಡ ಇದೊಂದು ಉತ್ತಮ ಅವಕಾಶವೆನಿಸಿದೆ.

*ಜಸ್​ಪ್ರೀತ್​ ಬುಮ್ರಾ

ಭಾರತ ಮತ್ತು ವಿಶ್ವದ ಅಗ್ರ ಬೌಲರ್​ ಆಗಿರುವ ಜಸ್​ಪ್ರೀತ್​ ಬುಮ್ರಾ ಬೆನ್ನುನೋವಿನ ಸಮಸ್ಯೆಯಿಂದಾಗಿ ಟೂರ್ನಿ ತಪ್ಪಿಸಿಕೊಂಡಿದ್ದಾರೆ. ಕಳೆದ ಆಸೀಸ್​ ಪ್ರವಾಸದ ಬಾರ್ಡರ್​&ಗಾವಸ್ಕರ್​ ಟ್ರೋಫಿಯಲ್ಲಿ ಅದ್ಭುತ ನಿರ್ವಹಣೆ ತೋರುವ ಮೂಲಕ ಭಾರತ ಏಕಪಯವಾಗಿ ಸೋಲುವುದನ್ನು ತಪ್ಪಿಸಿದ್ದ ಬುಮ್ರಾ, ಇದ್ದರೆ ಭಾರತೀಯ ಬೌಲಿಂಗ್​ ವಿಭಾಗಕ್ಕೆ ಹೆಚ್ಚಿನ ಶಕ್ತಿ ಸಿಗುತಿತ್ತು. ಬುಮ್ರಾ ಇಲ್ಲದಿದ್ದರೆ ಭಾರತ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಶೇ. 30&35ರಷ್ಟು ಕುಸಿಯುತ್ತದೆ ಎಂದು ಮಾಜಿ ಕೋಚ್​ ರವಿಶಾಸ್ತ್ರಿ ಹೇಳಿದ್ದರು.

*ಆಸೀಸ್​ ತ್ರಿವಳಿಗಳು ಗೈರು

ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಅತ್ಯಂತ ಹೆಚ್ಚಿನ ಹೊಡೆತ ಎದುರಿಸಿರುವ ಬೌಲಿಂಗ್​ ವಿಭಾಗ ಆಸ್ಟ್ರೆಲಿಯಾದ್ದಾಗಿದೆ. 2023ರ ವಿಶ್ವಕಪ್​ ಗೆಲುವಿನಲ್ಲಿ ಆಸೀಸ್​ಗೆ ನೆರವಾಗಿದ್ದ ವೇಗಿಗಳಾದ ನಾಯಕ ಪ್ಯಾಟ್​ ಕಮ್ಮಿನ್ಸ್​, ಮಿಚೆಲ್​ ಸ್ಟಾರ್ಕ್​, ಜೋಶ್​ ಹ್ಯಾಸಲ್​ವುಡ್​ ಈ ಬಾರಿ ಗೈರಾಗಲಿದ್ದಾರೆ. ಕಮ್ಮಿನ್ಸ್​, ಹ್ಯಾಸಲ್​ವುಡ್​ ಗಾಯದಿಂದ ಬಳಲುತ್ತಿದ್ದರೆ, ಸ್ಟಾರ್ಕ್​ ವೈಯಕ್ತಿಕ ಕಾರಣದಿಂದ ಹಿಂದೆ ಸರಿದಿದ್ದಾರೆ. ಇದರೊಂದಿಗೆ ವೇಗದ ಬೌಲಿಂಗ್​ ಆಲ್ರೌಂಡರ್​ಗಳಾದ ಮಿಚೆಲ್​ ಮಾರ್ಷ್​, ಮಾರ್ಕಸ್​ ಸ್ಟೋಯಿನಿಸ್​ ಕೂಡ ಅಲಭ್ಯರಾಗಿರುವುದರಿಂದ ಆಸೀಸ್​ ವೇಗದ ಬೌಲಿಂಗ್​ ವಿಭಾಗ ಸಂಪೂರ್ಣವಾಗಿ ಬಲ ಕಳೆದುಕೊಂಡಿದೆ.

*ಕೋಟ್​ಜೀ, ನೋಕಿಯಾ

ದಣ ಆಫ್ರಿಕಾ ತಂಡ ಪ್ರಮುಖ ವೇಗಿಗಳಾದ ಗೆರಾಲ್ಡ್​ ಕೋಟ್​ಜೀ ಮತ್ತು ಅನುಭವಿ ಅನ್ರಿಚ್​ ನೋಕಿಯಾರನ್ನು ಗಾಯದಿಂದಾಗಿ ಮಿಸ್​ ಮಾಡಿಕೊಳ್ಳಲಿದೆ. 2023ರ ಏಕದಿನ ವಿಶ್ವಕಪ್​ನಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ಕೋಟ್​ಜೀ ತೊಡೆಸಂದು ನೋವಿನಿಂದ ಬಳಲುತ್ತಿದ್ದರೆ, ಗಂಟೆಗೆ 150 ಕಿಲೋಮೀಟರ್​ಗಿಂತ ವೇಗವಾಗಿ ಚೆಂಡೆಸೆಯಬಲ್ಲ ನೋಕಿಯಾ, ಎಸ್​ಎ20 ಲೀಗ್​ಗಿಂತ ಮುನ್ನ ಮತ್ತೆ ಬೆನ್ನುನೋವಿನ ಸಮಸ್ಯೆ ಎದುರಿಸಿದ್ದಾರೆ. ಇವರಿಬ್ಬರ ಗೈರು ಹರಿಣಗಳ ಬೌಲಿಂಗ್​ ವಿಭಾಗದ ಹರಿತವನ್ನು ತಗ್ಗಿಸಿದೆ.

*ಘಜನ್​ಫರ್​, ಮುಜೀಬ್​

ಅಫ್ಘಾನಿಸ್ತಾನ ಸ್ಪಿನ್​ ವಿಭಾಗದ ಯುವ ಅಸ್ತ್ರಗಳೆನಿಸಿದ ಮುಜೀಬ್​ ಉರ್​ ರೆಹಮಾನ್​ ಮತ್ತು ಅಲ್ಲಾ ಘಜನ್​ಫ​ರ್​ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. 2023ರ ವಿಶ್ವಕಪ್​ನಲ್ಲಿ ಬಲಿಷ್ಠ ತಂಡಗಳಿಗೆ ಆಘಾತ ನೀಡಿ ಗಮನಸೆಳೆದಿದ್ದ ಅಫ್ಘಾನಿಸ್ತಾನ, ಚೊಚ್ಚಲ ಬಾರಿ ಆಡುತ್ತಿರುವ ಚಾಂಪಿಯನ್ಸ್​ ಟ್ರೋಫಿಯಲ್ಲೂ ಮಿಂಚಲು ಇವರಿಬ್ಬರ ಗೈರು ಹಿನ್ನಡೆಯಾಗಬಹುದು. ಅನುಭವಿ ಸ್ಪಿನ್ನರ್​ ರಶೀದ್​ ಖಾನ್​ ಇವರಿಬ್ಬರ ಸಮರ್ಥ ಬೆಂಬಲವನ್ನು ಮಿಸ್​ಮಾಡಿಕೊಳ್ಳಲಿದ್ದಾರೆ.

*ಬೆನ್​ ಸಿಯರ್ಸ್​

ನ್ಯೂಜಿಲೆಂಡ್​ ಬೌಲಿಂಗ್​ ವಿಭಾಗಕ್ಕೆ ಇತ್ತೀಚೆಗೆ ಹೊಸ ಸೇರ್ಪಡೆಯಾಗಿದ್ದ ವೇಗಿ ಬೆನ್​ ಸಿಯರ್ಸ್​ ಗಾಯದಿಂದಾಗಿ ಕೊನೇಕ್ಷಣದಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಾಕಿಸ್ತಾನದಲ್ಲಿ ತ್ರಿಕೋನ ಏಕದಿನ ಸರಣಿಯಲ್ಲಿ ಆಡುತ್ತಿದ್ದ ವೇಳೆ ಕಾಲಿನ ಸ್ನಾಯುಸೆಳೆತದ ಸಮಸ್ಯೆಯಿಂದಾಗಿ ಸಿಯರ್ಸ್​ ಅಲಭ್ಯರಾಗಿದ್ದಾರೆ. ಆದರೆ ಇತ್ತೀಚೆಗೆ ಏಷ್ಯಾದಲ್ಲೇ 3 ಸೀಮಿತ ಕ್ರಿಕೆಟ್​ ಸರಣಿಯಲ್ಲಿ ಗೆದ್ದು ಬೀಗಿರುವ ಕಿವೀಸ್​ಗೆ ಇದು ಹೆಚ್ಚಿನ ಹಿನ್ನಡೆಯಾಗುವ ಸಾಧ್ಯತೆ ಇಲ್ಲ.

*ಶಕಿಬ್​ ಅಲ್​ ಹಸನ್​

ಬಾಂಗ್ಲಾದೇಶದ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಶಕೀಬ್​ ಅಲ್​ ಹಸನ್​ ಐಸಿಸಿಯಿಂದ ಅನುಮಾನಾಸ್ಪದ ಬೌಲಿಂಗ್​ ಶೈಲಿಗಾಗಿ ನಿಷೇಧಕ್ಕೆ ಒಳಗಾಗಿರುವುದರಿಂದ ಟೂರ್ನಿಗೆ ಆಯ್ಕೆಯಾಗಿಲ್ಲ. ಬೌಲಿಂಗ್​ ಶೈಲಿಯ ಮರುಪರೀೆಯಲ್ಲೂ ಅವರು ವಿಲರಾಗಿದ್ದಾರೆ. ಹೀಗಾಗಿ ಕೇವಲ ಬ್ಯಾಟರ್​ ಆಗಿ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ. ಜತೆಗೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡಿ ವೃತ್ತೀಜಿವನ ಕೊನೆಗೊಳಿಸುವ 37 ವರ್ಷದ ಶಕೀಬ್​ ಕನಸು ಕೂಡ ಭಗ್ನಗೊಂಡಿದೆ.