ಬೆಂಗಳೂರು: ಚೆನ್ನೈನ ಶ್ರೀಪೆರುಂಬುದೂರ್ನಲ್ಲಿರುವ ಮದ್ರಾಸ್ ಇಂಟರ್ನ್ಯಾಷನಲ್ ಸಕ್ಯೂರ್ಟ್ನಲ್ಲಿ ಇತ್ತೀಚೆಗೆ ನಡೆದ ಟಿವಿಎಸ್ ಒಎಂಸಿ ರಾಷ್ಟ್ರೀಯ ಮೋಟಾರು ಬೈಕ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಹರ್ಷಿತ್ ವಿ. ಬೋಗರ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಅವರು 6 ರೇಸ್ಗಳಲ್ಲಿ ಗೆಲುವು ಸಾಧಿಸಿದರೆ, 2 ರೇಸ್ಗಳಲ್ಲಿ ರನ್ನರ್ಅಪ್ ಎನಿಸಿದರು. ಇನ್ನೊಂದು ರೇಸ್ನಲ್ಲಿ 2ನೇ ರನ್ನರ್ಅಪ್ ಸ್ಥಾನ ಪಡೆದರು. ಒಟ್ಟಾರೆಯಾಗಿ 40 ಅಂಕಗಳ ಮುನ್ನಡೆಯೊಂದಿಗೆ ಅವರು ಪ್ರಶಸ್ತಿ ಗೆದ್ದುಕೊಂಡರು.