ಕ್ರೀಡೆ

ಅಂಧರ ಕ್ರಿಕೆಟ್: ಬಾಂಗ್ಲಾದೇಶ ವಿರುದ್ಧ 43 ರನ್​ಗಳಿಂದ ಗೆದ್ದು ಬೀಗಿದ ಭಾರತ

ಬೆಂಗಳೂರು: ಇಂದು ಬೆಂಗಳೂರಿನ ಯಲಹಂಕದಲ್ಲಿರುವ ಮಣಿಪಾಲ್ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ನಡೆದ ಪುರುಷ ಅಂಧರ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರು ಭಾರತ ಗೆದ್ದು ಬೀಗಿತು.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು ಇಂದು ಭಾರತ ವಶಪಡಿಸಿಕೊಂಡಿತು. ಟಾಸ್​ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ತನ್ನ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 181 ರನ್​ಗಳನ್ನು ದಾಖಲಿಸಿತು. ಈ ಗುರಿ ಬೆನ್ನೆತ್ತಿದ ಬಾಂಗ್ಲಾದೇಶ ತಂಡ 20 ಓವರ್​ ಅಂತ್ಯಕ್ಕೆ ಕೇವಲ 138 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಮೂಲಕ ಭಾರತ ತಂಡ 43 ರನ್​ಗಳ ಜಯ ಸಾಧಿಸಿ, ಐದು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ಕಾಯ್ದುಕೊಂಡಿದೆ.

ಸಂಪೂರ್ಣ ವಿವರ -

ಭಾರತ- 181/6 (20 ov)

ಬಾಂಗ್ಲಾದೇಶ - 131/7 (20 ov)

ಪಂದ್ಯ ಶ್ರೇಷ್ಠ ಪ್ರಶಸ್ತಿ - ನಕುಲ್ ಬದ್ ನಾಯಕ್