ವಿಂಬಲ್ಡನ್ ರಾಯಲ್ ಬಾಕ್ಸ್‌ನಲ್ಲಿ ಸಚಿನ್-ಅಂಜಲಿ ಜೊತೆ ಶುಭಮನ್ ಗಿಲ್ ಪ್ರತ್ಯಕ್ಷ! 
ಟೆನಿಸ್

ವಿಂಬಲ್ಡನ್‌ನಲ್ಲಿ 'ಕ್ರಿಕೆಟ್ ದೇವರು' ಜೊತೆ ಶುಭಮನ್ ಪ್ರತ್ಯಕ್ಷ: ಸಚಿನ್​-ಅಂಜಲಿ ಜೊತೆ ಟೆನಿಸ್​​ ಸವಿದ ಗಿಲ್​; ನಮ್ಮ ಅತ್ತಿಗೆ ಎಲ್ಲಿ? ಎಂದ ನೆಟ್ಟಿಗರು!

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಅಂಜಲಿ ಪಕ್ಕದಲ್ಲೇ ಕುಳಿತು ಟೆನಿಸ್ ವೀಕ್ಷಿಸಿದ ಶುಭಮನ್ ಗಿಲ್
  • ವಿಂಬಲ್ಡನ್ ರಾಯಲ್ ಬಾಕ್ಸ್‌ನಲ್ಲಿ ಸಚಿನ್-ಅಂಜಲಿ ಜೊತೆ ಶುಭಮನ್ ಗಿಲ್ ಪ್ರತ್ಯಕ್ಷ!
  • ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು 'ನಮ್ಮ ಅತ್ತಿಗೆ ಸಾರಾ ಎಲ್ಲಿ?' ಎಂದ ನೆಟ್ಟಿಗರು
ಲಂಡನ್​: ಜಗತ್ತಿನ ಒಂದು ಮೂಲೆಯಲ್ಲಿ ಫಿಫಾ ಫುಟ್ಬಾಲ್​ ವಿಶ್ವಕಪ್​​ ನಡೆಯುತ್ತಿದ್ದರೆ, ಇನ್ನೊಂದು ಮೂಲೆಯಲ್ಲಿ ಜಗತ್​​ ಪ್ರಸಿದ್ಧ ವಿಂಬಲ್ಡನ್ ಲಾನ್​ ಟೆನಿಸ್​ ಟೂರ್ನಾಮೆಂಟ್​ ನಡೆಯುತ್ತಿದೆ. 
ಈ ವಿಂನಲ್ಡನ್​ ಕ್ರೀಡಾಕೂಟವನ್ನು ನೋಡಲು ಜಗತ್ತಿನ ಖ್ಯಾತನಾಮರೆಲ್ಲರೂ ಆಗಮಿಸುತ್ತಿದ್ದು, ಇಲ್ಲಿ ನಡೆಯುತ್ತಿರುವ ಟೆನಿಸ್​ ಅನ್ನು ವೀಕ್ಷಿಸಲು ಭಾರತ ಕ್ರಿಕೆಟ್ ತಂಡದ ಆಟಗಾರ ಶುಭಮನ್​ ಗಿಲ್​ (Shubman Gill in Wimbledon) ಹಾಜರಾಗಿರುವುದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಕ್ರಿಕೆಟ್​ ದೇವರ ಜೊತೆ ಟೆನಿಸ್​ ವೀಕ್ಷಣೆ!

ಲಂಡನ್​ನಲ್ಲಿ ನಡೆಯುತ್ತಿರುವ ಈ ವಿಂಬಲ್ಡನ್​ ಪಂದ್ಯಾವಳಿಯನ್ನು ವೀಕ್ಷಿಸಲು ಶುಭಮನ್​ ಗಿಲ್​ ವಿಂಬಲ್ಡನ್‌ನ ಪ್ರತಿಷ್ಠಿತ ರಾಯಲ್ ಬಾಕ್ಸ್ ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದ ಗಿಲ್​ ಪಕ್ಕದಲ್ಲಿ ಸಚಿನ್​ ತೆಂಡೂಲ್ಕರ್​ ಹಾಗೂ ಅವರ ಧರ್ಮಪತ್ನಿ ಅಂಜಲಿ ತೆಂಡೂಲ್ಕರ್​ ಕುಳಿತಿರುವ ಫೋಟೊಗಳು ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಮತ್ತೆ ಶುರುವಾದ ಡೇಟಿಂಗ್​ ರೂಮರ್​!
ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಪುತ್ರಿ ಸಾರಾ ತೆಂಡೂಲ್ಕರ್​ ಹಾಗೂ ಶುಭಮನ್​ ಗಿಲ್​​ ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆಂಬ ವದಂತಿ ಹಬ್ಬಿದೆ.
ಐಪಿಎಲ್​ ಸಮಯದಲ್ಲಿ ಶುಭಮನ್​ ಗಿಲ್​ ಪ್ರತಿನಿಧಿಸುವ ಗುಜರಾತ್​ ಟೈಟಾನ್ಸ್​ ಪಂದ್ಯಾವಳಿಯನ್ನು ವೀಕ್ಷಿಸಲು ಬರುತ್ತಿದ್ದ ಫೋಟೊ ಹಾಗೂ ವಿಡಿಯೋಗಳು ವೈರಲ್​ ಆಗುತ್ತಿದ್ದವು. ಆದರೆ ಈ ಬಾರಿ ಸಚಿನ್​ ತೆಂಡೂಲ್ಕರ್​ ದಂಪತಿಗಳ ಪಕ್ಕದಲ್ಲಿ ಕುಳಿತು ಶುಭಮನ್​ ಗಿಲ್​ ವಿಂಬಲ್ಡನ್​ ಪಂದ್ಯಾವಳಿ ವೀಕ್ಷಿಸಿರುವುದು ಈ ಡೇಟಿಂಗ್​ ವದಂತಿಗೆ ಮತ್ತೆ ರೆಕ್ಕೆ-ಪುಕ್ಕ ಬಂದತಾಗಿದೆ. 
ಸಾರಾ ಎಲ್ಲಿ ಎಂದ ನೆಟ್ಟಿಗರು!
ಶುಭಮನ್​ ಗಿಲ್​ ಸಚಿನ್​ ಹಾಗೂ ಅಂಜಲಿ ತೆಂಡೂಲ್ಕರ್​ ಜೊತೆ ಕುಳಿತು ವಿಂಬಲ್ಡನ್​ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದೆ ನೆಟ್ಟಿಗರು ಸಾರಾ ಎಲ್ಲಿ? ಅತ್ತಿಗೆ ಎಲ್ಲಿ? ಎಂದು ಶುಭಮನ್​ ಗಿಲ್​ನ ಕಮೆಂಟ್​ ಬಾಕ್ಸ್​ ತುಂಬಿಸಲು ಪ್ರಾರಂಭಿಸಿದ್ದಾರೆ. ಆದರೆ ಈ ಡೇಟಿಂಗ್​ ವದಂತಿ ಬಗ್ಗೆ ಶುಭಮನ್​ ಗಿಲ್​ ಆಗಲೀ ಅಥವಾ ಸಾರಾ ತೆಂಡೂಲ್ಕರ್​ ಆಗಲೀ ಇಲ್ಲಿವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ, (ಏಜನ್ಸೀಸ್​).