ಕ್ರೀಡೆ

ಅಭಿಷೇಕ್​-ರುತುರಾಜ್​ ಅಬ್ಬರ, ಜಿಂಬಾಬ್ವೆ ತತ್ತರ! 100 ರನ್​ಗಳಿಂದ ಗೆದ್ದು ಬೀಗಿದ ಗಿಲ್ ಪಡೆಗೆ ಸಂಭ್ರಮ

ಹರಾರೆ: ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋಲನ್ನು ಕಂಡಿದ್ದ ಟೀಮ್ ಇಂಡಿಯಾ ಇಂದು ಎರಡನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಶುಭಮನ್ ಗಿಲ್ ಪಡೆ 100 ರನ್​ಗಳ ಅಂತರದಿಂದ ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ಸಾಧಿಸಿತು. ಆಕರ್ಷಕ ಶತಕ ಸಿಡಿಸಿದ ಅಭಿಷೇಕ್ ಶರ್ಮ ಮತ್ತು ಅಜೇಯ 77 ರನ್​ ಗಳಿಸಿದ ರುತುರಾಜ್ ಗಾಯಕ್ವಾಡ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಹರಾರೆಯಲ್ಲಿ ನಡೆದ ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅಭೀಷೇಕ್ ಶರ್ಮ ಕ್ರಿಕೆಟ್ ಪ್ರಿಯರ ಮನಸೂರೆಗೊಳಿಸಿದರು. ತನ್ನ ಡೆಬ್ಯೂ ಮ್ಯಾಚ್​ನಲ್ಲಿಯೇ ಡಕ್ ಔಟ್​ ಆಗಿ ಪೆವಿಲಿಯನ್​ನತ್ತ ಮುಖಮಾಡಿದ್ದ ಯುವ ಬ್ಯಾಟರ್​ ಅಭಿಷೇಕ್ ಶರ್ಮ, ಇಂದಿನ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸುವ ಮೂಲಕ ತಮ್ಮ ಮೇಲಿನ ನಿರೀಕ್ಷೆಗಳನ್ನು ಉಳಿಸಿಕೊಂಡಿದ್ದಾರೆ.