ಕ್ರೀಡೆ

2025ರಲ್ಲಿ ಟೀಮ್​ ಇಂಡಿಯಾ ಫುಲ್​ ಬಿಜಿ! ಹೀಗಿದೆ ನೋಡಿ ಮುಂದಿನ ವರ್ಷಕ್ಕೆ ಭಾರತ ತಂಡದ ವೇಳಾಪಟ್ಟಿ... Team India

Team India : ಟೀಮ್​ ಇಂಡಿಯಾ 2024ರಲ್ಲಿ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಅದ್ಭುತ ಪ್ರದರ್ಶನದೊಂದಿಗೆ ಅಭಿಮಾನಿಗಳಿಗೆ ರೋಮಾಂಚನ ನೀಡಿತು. ಆದರೆ, ಟೀಮ್ ಇಂಡಿಯಾ ಪಾಲಿಗೆ 2024 ಮಿಶ್ರ ವರ್ಷ ಎಂದೇ ಹೇಳಬಹುದು. ಒಂದೆಡೆ ಭಾರತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದುಕೊಂಡರೆ, ಮತ್ತೊಂದೆಡೆ ಮೊದಲ ಬಾರಿಗೆ ತವರಿನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಹೀನಾಯ ಸೋಲನ್ನು ಅನುಭವಿಸಬೇಕಾಯಿತು.

ಅದೇನೆ ಇರಲಿ 2024ರಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಮನ ತಣಿಸಿದೆ. ಮುಂಬರುವ​ 2025ರಲ್ಲೂ ಟೀಮ್​ ಇಂಡಿಯಾ ತುಂಬಾ ಬಿಜಿಯಾಗಲಿದೆ. 2025 ಕೂಡ ಭಾರತ ತಂಡಕ್ಕೆ ಬಹಳ ವಿಶೇಷವಾಗಲಿದೆ. ಏಕೆಂದರೆ. 2025ರಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನೊಂದಿಗೆ ಒಟ್ಟು 2 ಐಸಿಸಿ ಟ್ರೋಫಿಗಳನ್ನು ಗೆಲ್ಲುವ ಅವಕಾಶ ಭಾರತಕ್ಕಿದೆ.

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ಹೊಸ ವರ್ಷವನ್ನು ಆರಂಭಿಸಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯವು ಜನವರಿ 3 ರಿಂದ 7 ರವರೆಗೆ ಸಿಡ್ನಿಯಲ್ಲಿ ನಡೆಯಲಿದೆ. ಇದರ ನಂತರ ಭಾರತವು ವೈಟ್-ಬಾಲ್ ಸರಣಿಯಲ್ಲಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ. ಇದಾದ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಹೀಗಾಗಿ 2025ರಲ್ಲಿ ಟೀಮ್​ ಇಂಡಿಯಾದ ವೇಳಾಪಟ್ಟಿ ಹೇಗಿದೆ ಎಂಬುದನ್ನು ನಾವೀಗ ತಿಳಿಯೋಣ.

ಜನವರಿ-ಫೆಬ್ರವರಿ: ಭಾರತಕ್ಕೆ ಇಂಗ್ಲೆಂಡ್ ಪ್ರವಾಸ (ಜನವರಿ 22 ರಿಂದ ಫೆಬ್ರವರಿ 12ರವರೆಗೆ)

ಭಾರತ vs ಇಂಗ್ಲೆಂಡ್ ಟಿ20 ಸರಣಿಯ (5 ಟಿ20 ಪಂದ್ಯ) ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

* 1ನೇ ಟಿ20: 2025 ಜನವರಿ 22, ಈಡನ್ ಗಾರ್ಡನ್ಸ್, ಕೋಲ್ಕತ್ತ.

* 2ನೇ ಟಿ20: 2025 ಜನವರಿ 25, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ.

* 3ನೇ ಟಿ20: 2025 ಜನವರಿ 28, ರಾಜ್‌ಕೋಟ್

* 4ನೇ ಟಿ20: 2025 ಜನವರಿ 31, ಪುಣೆ.

* 5ನೇ ಟಿ20: 2025 ಫೆಬ್ರವರಿ 2, ವಾಂಖೆಡೆ ಸ್ಟೇಡಿಯಂ, ಮುಂಬೈ.

ಭಾರತ vs ಇಂಗ್ಲೆಂಡ್ ಏಕದಿನ ಸರಣಿ (3 ಪಂದ್ಯ) ಪೂರ್ಣ ವೇಳಾಪಟ್ಟಿ..

* ಮೊದಲನೇ ಏಕದಿನ ಪಂದ್ಯ: 2025 ಫೆಬ್ರವರಿ 6, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ನಾಗ್ಪುರ

* ಎರಡನೇ ಏಕದಿನ ಪಂದ್ಯ: 2025 ಫೆಬ್ರವರಿ 9, ಬಾರಾಬತಿ ಸ್ಟೇಡಿಯಂ, ಕಟಕ್

* ಮೂರನೇ ಏಕದಿನ ಪಂದ್ಯ: 2025 ಫೆಬ್ರವರಿ 12, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಫೆಬ್ರವರಿ-ಮಾರ್ಚ್: ಚಾಂಪಿಯನ್ಸ್ ಟ್ರೋಫಿ 2025 (ಫೆಬ್ರವರಿ 19 ರಿಂದ ಮಾರ್ಚ್ 9ವರೆಗೆ)

* ಫೆಬ್ರವರಿ 20 - ಭಾರತ vs ಬಾಂಗ್ಲಾದೇಶ, ದುಬೈ ಸ್ಟೇಡಿಯಂ

* ಫೆಬ್ರವರಿ 23 - ಭಾರತ vs ಪಾಕಿಸ್ತಾನ, ದುಬೈ ಸ್ಟೇಡಿಯಂ

* ಮಾರ್ಚ್ 2 - ಭಾರತ vs ನ್ಯೂಜಿಲೆಂಡ್ , ದುಬೈ ಸ್ಟೇಡಿಯಂ

* ಮಾರ್ಚ್ 4 - ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ - ದುಬೈ ಸ್ಟೇಡಿಯಂ (ಅರ್ಹತೆ ಇದ್ದರೆ)

* ಮಾರ್ಚ್ 9 - ಚಾಂಪಿಯನ್ಸ್ ಟ್ರೋಫಿ ಫೈನಲ್ , ದುಬೈ ಸ್ಟೇಡಿಯಂ (ಅರ್ಹತೆ ಇದ್ದರೆ)

ಮಾರ್ಚ್-ಮೇ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ( ಮಾರ್ಚ್ 14 ರಿಂದ ಮೇ 25ರವರೆಗೆ).

ಜೂನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್: ಜೂನ್​ 11 ರಿಂದ 15ರವರೆಗೆ ಲಂಡನ್​ನಲ್ಲಿ ನಡೆಯಲಿದೆ. (ಅರ್ಹತೆ ಇದ್ದರೆ).

ಜೂನ್-ಆಗಸ್ಟ್: ಭಾರತ ಇಂಗ್ಲೆಂಡ್ ಪ್ರವಾಸ (ಜೂನ್ 20 ರಿಂದ ಆಗಸ್ಟ್ 4ರವರೆಗೆ).

ಮೊದಲ ಟೆಸ್ಟ್: ಜೂನ್ 20 ರಿಂದ 24ರವರೆಗೆ, ಹೆಡಿಂಗ್ಲಿ, ಲೀಡ್ಸ್

ಎರಡನೇ ಟೆಸ್ಟ್: ಜುಲೈ 2 ರಿಂದ 6ರವರೆಗೆ, ಎಡ್ಜ್‌ಬಾಸ್ಟನ್, ಬರ್ಮಿಂಗ್​ಹ್ಯಾಮ್​

ಮೂರನೇ ಟೆಸ್ಟ್: ಜುಲೈ 10 ರಿಂದ 14ರವರೆಗೆ, ಲಾರ್ಡ್ಸ್, ಲಂಡನ್

ನಾಲ್ಕನೇ ಟೆಸ್ಟ್: ಜುಲೈ 23 ರಿಂದ 27ರವರೆಗೆ, ಮ್ಯಾಂಚೆಸ್ಟರ್

ಐದನೇ ಟೆಸ್ಟ್: ಜುಲೈ 31 ರಿಂದ ಆಗಸ್ಟ್ 4ರವರೆಗೆ, ಓವಲ್.

ಈ ಪಂದ್ಯಗಳ ವಿವರಗಳು ಇಲ್ಲಿಯವರೆಗೆ ಬಹಿರಂಗವಾಗಿವೆ. ಇದಲ್ಲದೆ, ವೇಳಾಪಟ್ಟಿಯ ಪ್ರಕಾರ, ಟೀಮ್​ ಇಂಡಿಯಾ 2025ರಲ್ಲಿ ಬಾಂಗ್ಲಾದೇಶ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳನ್ನು ಆಡಲಿದೆ. ಆದರೆ, ಆ ಸರಣಿಗಳ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. (ಏಜೆನ್ಸೀಸ್​)