ಕ್ರೀಡೆ

ಸಿಡ್ನಿ ಟೆಸ್ಟ್​ನಲ್ಲೂ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ; 185 ರನ್​ಗಳಿಗೆ ಆಲೌಟ್​ ಆದ Team India

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್​ ಇಂಡಿಯಾ (Team India) 185 ರನ್​ಗಳಿಗೆ ಆಲೌಟ್​ ಆಗಿದ್ದು, ಆತಿತೇಯರು ಮತ್ತೊಮ್ಮೆ ಪ್ರವಾಸಿ ತಂಡದ ಮೇಲೆ ಹಿಡಿತ ಸಾಧಿಸಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ (Team India) ಆರಂಭದಲ್ಲೇ ಆಘಾತ ನೀಡಿದ ಆಸ್ಟ್ರೇಲಿಯಾದ ಬೌಲರ್​ಗಳು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಮುನ್ಸೂಚನೆಯನ್ನು ನೀಢಿದರು. ರಿಷಭ್​ ಪಂತ್ (40 ರನ್, 98 ಎಸೆತ, 3 ಬೌಂಡರಿ, 1 ಸಿಕ್ಸರ್​) ಕೆಲಕಾಲ ತಂಡಕ್ಕೆ ಆಸರೆಯಾಗಿದ್ದು ಬಿಟ್ಟರೆ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶವನ್ನು ನೀಡುವಲ್ಲಿ ವಿಫಲರಾದರು.

ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್​ (20-31-4), ಮಿಚೆಲ್​ ಸ್ಟಾರ್ಕ್​ (18-5-49-3), ಪ್ಯಾಟ್​ ಕಮಿನ್ಸ್​ (15.2-4-37-2), ನ್ಯಾಥನ್​ ಲ್ಯಾನ್​ (6-2-19-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ. ಇನ್ನೂ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿರುವ ಭಾರತ ತಂಡ ಉಸ್ಮಾನ್​ ಖವಾಜಾರನ್ನು ಔಟ್​ ಮಾಡಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್​ ನಷ್ಟಕ್ಕೆ 9 ರನ್​ಗಳಿಸಿದೆ.