ಚೆನ್ನೈ: 18ನೇ ಆವೃತ್ತಿಯ ಐಪಿಎಲ್ಗೆ (IPL) ಸಂಬಂಧಿಸಿದ ಸುದ್ದಿಗಳು ಈಗಾಗಲೇ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, 2025ರಲ್ಲಿ ನಡೆಯಲಿರುವ 18ನೇ ಆವೃತ್ತಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕ್ರೀಡಾ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇನ್ನೂ 18ನೇ ಆವೃತ್ತಿ ಶುರುವುದಾಗುವುದಕ್ಕೂ ಮುನ್ನ ರಿಟೇನ್ಗೆ (Retain) ಸಂಬಂಧಿಸಿದ ಸುದ್ದಿಗಳು ಸಖತ್ ಸೌಂಡ್ ಮಾಡುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿವೆ. ಇದೀಗ ರಿಟೇನ್ಗೆ ಸಂಬಂಧಿಸಿದಂತೆ ಟೀಮ್ ಇಂಡಿಯಾ (Team India) ಆಟಗಾರ ಆರ್. ಅಶ್ವಿನ್ (R Ashwin) ಚೆನ್ನೈ ಸೂಪರ್ಕಿಂಗ್ಸ್ಗೆ (Chennai SuperKings) ಸಲಹೆ ಒಂದನ್ನು ನೀಡಿದ್ದು, ಈ ವಿಚಾರ ಸಖತ್ ಸದ್ದು ಮಾಡುತ್ತಿದೆ.
ರಿಟೇನ್ಗೆ (Retain) ಸಂಬಂಧಿಸಿದಂತೆ ಈಗಾಗಲೇ ಟೀಮ್ ಇಂಡಿಯಾದ (Team India) ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಸಖತ್ ಸೌಂಡ್ ಮಾಡುತ್ತಿದ್ದು, ಅನಕ್ಯಾಪ್ಡ್ ಪ್ಲೇಯರ್ ನಿಯಮದಡಿ ಸಿಎಸ್ಕೆ (CSK) ಅವರನ್ನು ರಿಟೇನ್ ಮಾಡುವುದು ಪಕ್ಕಾ ಎಂದು ಹೇಳಲಾಗಿದೆ. ಆದರೆ, ಧೋನಿ ಬದಲಿಗೆ ನೀವು ಈ ಯುವ ಆಟಗಾರನನ್ನು ಅನ್ಕ್ಯಾಪ್ಡ್ ನಿಯಮದಡಿ ಈ ಆಟಗಾರನನ್ನು ರಿಟೇನ್ (Retain) ಮಾಡುವುದು ಸೂಕ್ತ ನಿಯಮವಾಗಿದ್ದು, ಇದು ತಂಡಕ್ಕೆ ಸಹಕಾರಿಯಾಗಲಿದೆ ಎಂದು ಆರ್. ಅಶ್ವಿನ್ (R Ashwin) ಸಿಎಸ್ಕೆ (CSK) ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಚೆನ್ನೈ, ಮುಂಬೈ ಅಲ್ಲವೇ ಅಲ್ಲ…Ashwin ಪ್ರಕಾರ ಐಪಿಎಲ್ಗಾಗಿ ದೇವರು ಗಿಫ್ಟ್ ಕೊಟ್ಟ ಫ್ರಾಂಚೈಸಿ ಇದೇ ನೋಡಿ
ಈ ಕುರಿತು ಮಾತನಾಡಿರುವ ಅಶ್ವಿನ್ (Ashwin), ಮುಂಬೈ ಇಂಡಿಯನ್ಸ್ (Mumbai Indians) ಆರು ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ನೀವು ಹೇಳಿದರೆ, ಸಿಎಸ್‌ಕೆಗೆ (CSK) ಯಾಕೆ ಸಾಧ್ಯವಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಮ್ಮಲ್ಲಿ ಋತುರಾಜ್, ರವೀಂದ್ರ ಜಡೇಜಾ, ಮತೀಶ ಪತಿರಾಣ, ಶಿವಂ ದುಬೆ, ಎಂ.ಎಸ್. ಧೋನಿ, ಸಮೀರ್ ರಿಜ್ವಿರನ್ನು (Sameer Rizvi) ರಿಟೇನ್ ಮಾಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ.
ಸಮೀರ್ ರಿಜ್ವಿನನ್ನು ಅನ್ಕ್ಯಾಪ್ಡ್ ನಿಯಮದಡಿ (Uncapped Rule) ರಿಟೇನ್ (Retain) ಮಾಡಬೇಕು. ಏಕೆಂದರೆ ಆತ ಉತ್ತರಪ್ರದೇಶ ಟಿ20 ಲೀಗ್ನಲ್ಲಿ ಪ್ರತಿನಿತ್ಯ ವಿಭಿನ್ನ ಆಟವನ್ನು ಪ್ರದರ್ಶಿಸುತ್ತಿದ್ದಾನೆ. ಆತನಿಗೆ ಸ್ವಲ್ಪ ಸಮಯ ಬೇಕು ಬೇರೆ ಆಟಗಾರರಂತೆ ಆತನೂ ಮುನ್ನೆಲೆಗೆ ಬರುತ್ತಾನೆ. ಹೀಗಾಗಿ ಅನ್ಕ್ಯಾಪ್ಡ್ ನಿಯಮದಡಿ ಆತನನ್ನು ಸಿಎಸ್ಕೆ ಫ್ರಾಂಚೈಸಿ ರಿಟೇನ್ ಮಾಡುವುದು ಸೂಕ್ತ ಎಂದು ಟೀಮ್ ಇಂಡಿಯಾ (Team India) ಆಟಗಾರ ಆರ್. ಅಶ್ವಿನ್ (R Ashwin) ಸಲಹೆ ನೀಡಿದ್ದಾರೆ.