ನವದೆಹಲಿ: ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಟಾಟಾ ಗ್ರೂಪ್ ಇನ್ನೂ 5 ವರ್ಷಗಳ ಕಾಲ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.
ಟಾಟಾ ಸನ್ಸ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಕಂಪನಿಗಳು ತಲಾ ವಾರ್ಷಿಕ 500 ಕೋಟಿ ರೂ.ನಂತೆ ಒಟ್ಟಾರೆ 2,500 ಕೋಟಿ ರೂ. ಬಿಡ್ ಸಲ್ಲಿಸಿವೆ. ಆದರೆ ಹಾಲಿ ಒಪ್ಪಂದ ಹೊಂದಿರುವ ಕಾರಣಕ್ಕೆ ಬಿಸಿಸಿಐ, ಟಾಟಾಗೆ ಆದ್ಯತೆ ನೀಡಿದೆ ಎನ್ನಲಾಗಿದೆ.
ಟಾಟಾ ಗ್ರೂಪ್ ಕಳೆದೆರಡು ವರ್ಷಗಳಿಗೆ 335 ಕೋಟಿ ರೂ.ನಂತೆ 670 ಕೋಟಿ ರೂ. ಒಪ್ಪಂದ ಹೊಂದಿತ್ತು. ಈ ಬಾರಿ ಬಿಸಿಸಿಐ ವಾರ್ಷಿಕ 350 ಕೋಟಿ ರೂ.ಗಳ ಕನಿಷ್ಠ ಬಿಡ್ ನಿಗದಿಪಡಿಸಿತ್ತು.