ಕ್ರೀಡೆ

VIDEO| ಪಂಚೆ ಧರಿಸಿದವರಿಗೆ ಪ್ರವೇಶವಿಲ್ಲ! ವಿವಾದಕ್ಕೀಡಾದ ವಿರಾಟ್​ ಕೊಹ್ಲಿ ರೆಸ್ಟೋರೆಂಟ್​!

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರ ಒಡೆತನಕ್ಕೆ ಒಳಪಟ್ಟ ಮುಂಬೈನ ರೆಸ್ಟೋರೆಂಟ್​ ಪಂಚೆ ಧರಿಸಿದವರಿಗೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೀಡಾಗಿದೆ.

ಕೊಹ್ಲಿ ಕ್ರಿಕೆಟ್​ ಜತೆಗೆ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಮುಂಬೈನ ಜೂಹುನಲ್ಲಿ "ಒನ್​ 8 ಕಮ್ಯೂನ್​' ಎಂಬ ರೆಸ್ಟೋರೆಂಟ್​ ಕೂಡ ನಡೆಸುತ್ತಿದ್ದಾರೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಪಂಚೆ ಧರಿಸಿ ಈ ರೆಸ್ಟೋರೆಂಟ್​ ಪ್ರವೇಶಿಸಲು ಯತ್ನಿಸಿದಾಗ ಪ್ರವೇಶ ನಿರಾಕರಿಸಲಾಗಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನೂ ಹಂಚಿಕೊಂಡಿದ್ದು, "ನಾನು ವಿರಾಟ್​ ಕೊಹ್ಲಿ ಅವರು ಬಹುದೊಡ್ಡ ಅಭಿಮಾನಿ. ಹೀಗಾಗಿ ಈ ರೆಸ್ಟೋರೆಂಟ್​ ಪ್ರವೇಶಿಸಲು ಉತ್ಸುಕನಾಗಿದ್ದೆ. ಆದರೆ ಪಂಚೆ ಧರಿಸಿ ರೆಸ್ಟೋರೆಂಟ್​ ಪ್ರವೇಶಿಸಲು ಮ್ಯಾನೇಜ್​ಮೆಂಟ್​ ಅನುಮತಿ ನಿರಾಕರಿಸಿದೆ. ಇದು ನಮ್ಮ ವಸ್ತ್ರಸಂಹಿತೆಯಲ್ಲಿ ಇಲ್ಲ ಎಂದಿದೆ' ಎಂದಿದ್ದಾರೆ.


ರೆಸ್ಟೋರೆಂಟ್​ ಮುಂದೆ ನಿಂತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಶಾರ್ಟ್ಸ್​ ಧರಿಸಿದವರು ಒಳಗೆ ಹೋಗುತ್ತಿದ್ದಾರೆ. ಆದರೆ ಪಂಚೆ ಧರಿಸಿದವರನ್ನು ತಡೆದು ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.