ಕ್ರೀಡೆ

ಸನ್‌ರೈಸ್ ಪಬ್ಲಿಕ್ ಶಾಲೆಯಲ್ಲಿ ಪ್ರತಿಭಾನ್ವೇಷಣೆ, ವಿಜ್ಞಾನ ಪ್ರದರ್ಶನ

ಬೆಂಗಳೂರು: ಪೀಣ್ಯ 2ನೇ ಹಂತದ ರಾಜಗೋಪಾಲನಗರದಲ್ಲಿರುವ ಸನ್ ರೈಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರತಿಭಾನ್ವೇಷಣೆ ಹಾಗೂ ವಿಜ್ಞಾನ ಪ್ರದರ್ಶನ ಅತಿಥಿಗಳ ಗಮನ ಸೆಳೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವೈಚಾರಿಕ ಮನೋಭಾವ ಮೂಡಿಸಬೇಕು. ಮೂಡನಂಬಿಕೆಗಳನ್ನು ತೊಡೆದು ಹಾಕಿದರೆ ವೈಜ್ಞಾನಿಕವಾಗಿ ಉತ್ತಮ ಸಾಧನೆ ಮಾಡಲು ಸಾಧ್ಯ. ಶಾಲೆಯಲ್ಲಿ ಮಕ್ಕಳಿಗೆ ದೆವ್ವ ಪಿಶಾಚಿಗಳ ಬಗೆ ಇರುವ ಭಯ ಹೋಗಲಾಡಿಸಲು ಒಂದು ಕೋಣೆ ನಿರ್ಮಿಸಿದ್ದು, ಇದು ಮಕ್ಕಳಲ್ಲಿ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಲ್ಇ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜಶೇಖರ್ ಹಿರೇಮಠ, ಶಾಲೆಯ ಕಾರ್ಯದರ್ಶಿಗಳಾದ ಡಾ.ಮಹೇಶ್, ಪ್ರಾಂಶುಪಾಲರಾದ ಧನಲಕ್ಷ್ಮಿ ಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.