ಕ್ರೀಡೆ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ, ಎಂಟರಘಟ್ಟಕ್ಕೆ ಕರ್ನಾಟಕ ಎಂಟ್ರಿ

ಬೆಂಗಳೂರು: ಲೀಗ್ ಹಂತದ ಕೊನೇ ದಿನದ ಹಣಾಹಣಿಗಳಲ್ಲಿ ಪೂರಕ ಲಿತಾಂಶಗಳು ಬಂದ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕೊನೇಕ್ಷಣದಲ್ಲಿ ನಾಕೌಟ್ ಪ್ರವೇಶ ಒಲಿಸಿಕೊಂಡಿದೆ. ಎಲೈಟ್ ಎ ಗುಂಪಿನಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲನುಭವಿಸಿ 16 ಅಂಕಗಳೊಂದಿಗೆ 2ನೇ ಸ್ಥಾನ ಪಡೆದ ಕರ್ನಾಟಕ ತಂಡ, ರನ್‌ರೇಟ್ ಲೆಕ್ಕಾಚಾರದಲ್ಲಿ ಎಂಟರ ಘಟ್ಟಕ್ಕೇರಿದೆ.

ಅಗ್ರಸ್ಥಾನದಲ್ಲಿರುವ ಪಂಜಾಬ್ ತಂಡ ಎ ಗುಂಪಿನಿಂದ ಅಜೇಯ ಸಾಧನೆಯೊಂದಿಗೆ ಕ್ವಾರ್ಟರ್‌ೈನಲ್‌ಗೇರಿದೆ. ಬಿ ಗುಂಪಿನಲ್ಲಿ ಬಂಗಾಳ ತಂಡ ತನ್ನ ಕಡೇ ಲೀಗ್ ಪಂದ್ಯದಲ್ಲಿ ತಮಿಳುನಾಡಿಗೆ ಶರಣಾಗಿದ್ದು, ಇ ಗುಂಪಿನಲ್ಲಿ ಕೇರಳ ತಂಡ ಹರಿಯಾಣ ತಂಡಕ್ಕೆ ಶರಣಾಗಿದ್ದು ಕರ್ನಾಟಕ ತಂಡದ ಪಾಲಿಗೆ ವರದಾನವಾಯಿತು. ರನ್‌ರೇಟ್ ಲೆಕ್ಕಾಚಾರದಲ್ಲಿ ಮುನ್ನಡೆ ಸಾಧಿಸಿದ ಕರ್ನಾಟಕ 8ನೇ ತಂಡವಾಗಿ ಅರ್ಹತೆ ಪಡೆಯಿತು.

ಜನವರಿ 26ರಿಂದ 31 ರವರೆಗೆ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನಲ್ಲಿ ನಾಕೌಟ್ ಹಂತ ನಡೆಯಲಿದೆ.