ಬ್ರಿಸ್ಬೇನ್: ಫ್ರಿಡೋಲಿನಾ ರಾಲ್ಫೋ (30ನೇ ನಿಮಿಷ) ಮತ್ತು ಕೊಸೊವೇರ್ ಅಸ್ಲಾನಿ (62ನೇ ನಿಮಿಷ) ಸಿಡಿಸಿದ ಗೋಲುಗಳ ನೆರವಿನಿಂದ ಸ್ವೀಡನ್ ತಂಡ ಮಹಿಳೆಯರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಜಂಟಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 2&0 ಅಂತರದಿಂದ ಮಣಿಸಿ 3ನೇ ಸ್ಥಾನದ ಸಂಭ್ರಮ ಕಂಡಿದೆ.
ಸ್ವೀಡನ್ ಟೂರ್ನಿ ಇತಿಹಾಸದಲ್ಲಿ 4ನೇ ಬಾರಿಗೆ ಕಂಚಿನ ಪದಕ ಗೆದ್ದುಕೊಂಡಿತು. ಈ ಮುನ್ನ 1991, 2011 ಮತ್ತು 2019ರಲ್ಲೂ ಈ ಸಾಧನೆ ಮಾಡಿತ್ತು. ಆಸ್ಟ್ರೆಲಿಯಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ನಡುವೆಯೂ ಟೂರ್ನಿ ಇತಿಹಾಸದಲ್ಲಿ ತನ್ನ ಶ್ರೇಷ್ಠ ಸಾಧನೆ ದಾಖಲಿಸಿತು.
ಹಾಲಿ ಚಾಂಪಿಯನ್ ಅಮೆರಿಕ, ಮಾಜಿ ಚಾಂಪಿಯನ್ ಜಪಾನ್ನಂಥ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಮುನ್ನುಗ್ಗಿದ್ದ ಸ್ವೀಡನ್, 3ನೇ ಸ್ಥಾನಕ್ಕಾಗಿ ಶನಿವಾರ ನಡೆದ ಹೋರಾಟದಲ್ಲೂ ಆಸೀಸ್ ವಿರುದ್ಧ ಪ್ರಾಬಲ್ಯ ಸಾಧಿಸಿತು.