ಕ್ರೀಡೆ

VIDEO: ಗೋಮಾತೆಗೆ ಕ್ರಿಕೆಟಿಗ ಸುರೇಶ್​ ರೈನಾ ಆರೈಕೆ..!

ಲಖನೌ: ಕ್ರಿಕೆಟಿಗ ಸುರೇಶ್​ ರೈನಾ, 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ (ಐಪಿಎಲ್​) ಸಜ್ಜಾಗುತ್ತಿದ್ದಾರೆ. ಲಾಕ್​ಡೌನ್​ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಇನ್​ಸ್ಟಾಗ್ರಾಂ, ಟ್ವಿಟರ್​ನಲ್ಲಿ ದೈನಂದಿನ ಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಐಪಿಎಲ್​ಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಗಾಜಿಯಾಬಾದ್​ನಲ್ಲಿ ಪೀಯುಷ್​ ಚಾವ್ಲ, ಮೊಹಮದ್​ ಶಮಿ ಜತೆಗೂಡಿ ಕ್ರಿಕೆಟ್​ ಅಭ್ಯಾಸ ಮಾಡುತ್ತಿರುವ ವಿಡಿಯೋ ಪ್ರಕಟಿಸಿದ್ದರು. ಫಾರ್ಮ್ ಹೌಸ್​ ಒಂದಕ್ಕೆ ತೆರಳಿ ಅಲ್ಲಿದ್ದ ಹಸುವಿನ ಅರೈಕೆ ಮಾಡಿದ್ದಾರೆ. ಇನ್​ಸ್ಟಾದಲ್ಲಿ ಈ ವಿಡಿಯೋ ಪ್ರಕಟಿಸಿ ಜೈ ಗೋಮಾತಾ, ನಮ್ಮ ಬೇರುಗಳೊಂದಿಗೆ ನಾವು ಯಾವಾಗಲೂ ಹತ್ತಿರವಾಗಿರಬೇಕು ಎಂದು ಬರೆದುಕೊಂಡಿದ್ದಾರೆ.

ಭಾರತೀಯ ಆಟಗಾರರಿಗೂ ವಿದೇಶಿ ಲೀಗ್​ಗಳಲ್ಲಿ ಆಡಲು ಅನುಮತಿ ನೀಡಬೇಕೆಂದು ಸುರೇಶ್​ ರೈನಾ ಇತ್ತೀಚೆಗಷ್ಟೇ ಬಿಸಿಸಿಐಗೆ ಮನವಿ ಮಾಡಿದ್ದರು, ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುವ ಆಟಗಾರರಿಗೆ ಅನುಮತಿ ನೀಡಿ, ಐಪಿಎಲ್​ನಿಂದ ಹಣ ಗಳಿಸುವುದೇ ಸಾಕು. ವಿದೇಶಿ ಲೀಗ್​ಗಳಲ್ಲಿ ಭಾರತೀಯರು ಮಿಂಚಲಿ ಎಂದು ರೈನಾ ಹೇಳಿದ್ದರು. ಜತೆಗೆ ಧೋನಿ ಬಳಿಕ ರೋಹಿತ್​ ಶರ್ಮ ನನ್ನ ಫೇವರಿಟ್​ ನಾಯಕನಾಗಲಿದ್ದಾರೆ ಎಂದು ಹೇಳಿಕೊಂಡಿದ್ದರು.

ಎಂಎಸ್​ ಧೋನಿ ಸಾರಥ್ಯದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಭಾಗವಾಗಿರುವ ರೈನಾ, ಈಗಾಗಲೇ ಐಪಿಎಲ್​ಗೆ ಸಜ್ಜಾಗುತ್ತಿದ್ದಾರೆ. ಎಡಗೈ ಬ್ಯಾಟ್ಸ್​ಮನ್​ ರೈನಾ, ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡಕ್ಕೂ ಸೈ ಎನಿಸಿಕೊಂಡಿದ್ದಾರೆ.