ಕ್ರೀಡೆ

ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಎದುರು ಸೋಲಿನಲ್ಲೂ ಗಮನಸೆಳೆದ ಭಾರತದ ಸುಮಿತ್

ಪರುಗ್ವೆ (ಚೆಕ್ ಗಣರಾಜ್ಯ): ಭಾರತದ ಸುಮಿತ್ ನಗಾಲ್ ಪರುಗ್ವೆ ಓಪನ್ ಟೆನಿಸ್ ಟೂರ್ನಿ ಎಂಟರಘಟ್ಟದ ಪಂದ್ಯದಲ್ಲಿ ಸೋಲಿನಲ್ಲೂ ಗಮನಸೆಳೆದರು. ಮೂರು ಗ್ರಾಂಡ್ ಸ್ಲಾಂ ವಿಜೇತ ಸ್ವಿಜರ್ಲೆಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾಗೆ ಮೊದಲ ಸೆಟ್‌ನಲ್ಲೇ 6-2 ರಿಂದ ಶಾಕ್ ನೀಡಿದ್ದ ಸುಮಿತ್, ಕಡೇ 2 ಸೆಟ್‌ಗಳಲ್ಲಿ ಸೋಲನುಭವಿಸಿದರು. ಗುರುವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಸುಮಿತ್ ನಗಾಲ್ 6-2, 6-0, 6-1 ಸೆಟ್‌ಗಳಿಂದ ಸೋಲನುಭವಿಸಿದರು.

ಸುಮಾರು ಒಂದು ಗಂಟೆ 19 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರ ನಿರಾಸೆ ಅನುಭವಿಸಿದರು. ಸ್ವಿಜರ್ಲೆಂಡ್‌ನ ಸ್ಟಾರ್ ಆಟಗಾರನ ನಿರೀಕ್ಷಿತ ಗೆಲುವು ಕಂಡರೂ ಭಾರತೀಯ ಆಟಗಾರ ಪ್ರಬಲ ಪೈಪೋಟಿ ನೀಡಿದರು. ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಸ್ಟಾರ್ ಆಟಗಾರ ರೋಜರ್ ಫೆಡರರ್‌ಗೆ ಪ್ರಬಲ ಪೈಪೋಟಿ ನೀಡಿದ್ದರು. ನಗಾಲ್ ಗುರುವಾರ ನಡೆದ 2ನೇ ಸುತ್ತಿನ ಹೋರಾಟದಲ್ಲಿ 5-7, 7-6 (4), 6-3 ಸೆಟ್‌ಗಳಿಂದ ಸ್ಥಳೀಯ ಪ್ರತಿಭೆ ಕಿರಿ ಲೆಚ್ಕಾ ಅವರನ್ನು ಮಣಿಸಿದ್ದರು.