ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯವನ್ನು ಒಟ್ಟು 7 ಚಾನಲ್ಗಳಲ್ಲಿ ನೇರಪ್ರಸಾರ ಮಾಡಲು ಸ್ಟಾರ್ ಸ್ಪೋರ್ಟ್ಸ್ ಚಾನಲ್ ನಿರ್ಧರಿಸಿದೆ. ಕನ್ನಡ ಸಹಿತ ಕೆಲವು ಪ್ರಾದೇಶಿಕ ಭಾಷೆಗಳಲ್ಲೂ ಪಂದ್ಯದ ವೀಕ್ಷಕ ವಿವರಣೆ ಮತ್ತು ನೇರಪ್ರಸಾರ ಇರಲಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಭಾರತದಲ್ಲಿ ಒಟ್ಟು 5 ಭಾಷೆಗಳಲ್ಲಿ ನೇರಪ್ರಸಾರ ಕಾಣಲಿದೆ. ಇಂಗ್ಲಿಷ್, ಹಿಂದಿ ಜತೆಗೆ ಕನ್ನಡ, ತೆಲುಗು ಮತ್ತು ತಮಿಳು ಕಾಮೆಂಟರಿಯಲ್ಲೂ ಪಂದ್ಯ ನೇರಪ್ರಸಾರ ಕಾಣಲಿದೆ.
ಇಂಗ್ಲೆಂಡ್ನ ಸೌಥಾಂಪ್ಟನ್ನಲ್ಲಿ ಜೂನ್ 18ರಿಂದ 22ರವರೆಗೆ ನಡೆಯಲಿರುವ ಪಂದ್ಯ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್1 ಚಾನಲ್ನಲ್ಲಿ ಪ್ರಮುಖವಾಗಿ ಪ್ರಸಾರವಾಗಲಿದೆ. ಇದಲ್ಲದೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ, ತಮಿಳು, ತೆಲುಗು ಚಾನಲ್ನಲ್ಲೂ ನೇರಪ್ರಸಾರವಾಗಲಿದೆ. ಇದಲ್ಲದೆ ಡಿಸ್ನಿ+ ಹಾಟ್ಸ್ಟಾರ್ನಲ್ಲೂ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.