ಕ್ರೀಡೆ

ಕೊಹ್ಲಿ- ಅನುಷ್ಕಾ ತಂದೆ-ತಾಯಿ ಆಗುತ್ತಿರುವುದಕ್ಕೆ ಟ್ರೋಲ್​ ಆಗುತ್ತಿದ್ದಾನೆ ಬಾಲಿವುಡ್​ ಸ್ಟಾರ್​ ದಂಪತಿ ಪುತ್ರ..!

ಬೆಂಗಳೂರು: ಸ್ಟಾರ್​ ದಂಪತಿ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ತಂದೆ-ತಾಯಿ ಆಗುತ್ತಿರುವ ವಿಷಯವನ್ನು ಗುರುವಾರವಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಸ್ಟಾರ್​ ದಂಪತಿಗೆ ಕ್ರೀಡಾ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿ ಬಂದಿತ್ತು. ಜತೆಗೆ ನೆಟ್ಟಿಗರು ಮೀಮ್ಸ್​ಗಳ ಮೂಲಕ ಶುಭ ಹಾರೈಸಿದ್ದರು. ಇದರ ಬೆನ್ನಲ್ಲೇ ಬಾಲಿವುಡ್​ ಸ್ಟಾರ್​ ದಂಪತಿ ಸೈಫ್ ಅಲಿ ಖಾನ್​ ಹಾಗೂ ಕರೀನಾ ಕಪೂರ್​ ದಂಪತಿ ಪುತ್ರ ತೈಮೂರ್​ ಅಲಿ ಖಾನ್​ ವಿವಿಧ ಮೀಮ್ಸ್​ಗಳ ಮೂಲಕ ನೆಟ್ಟಿಗರ ಆಹಾರವಾಗಿದ್ದಾನೆ.

ತೈಮೂರ್​ ಅಲಿ ಖಾನ್​, ಕುರಿತು ಬಗೆ ಬಗೆ ಜೋಕ್​ಗಳನ್ನು ಸೃಷ್ಟಿಸಿ ಟ್ರೋಲ್​ ಮಾಡಲಾಗುತ್ತಿದೆ. ವಿರಾಟ್​-ಅನುಷ್ಕಾ ಜೋಡಿ ವಿರುಷ್ಕಾ ಅಂತಾನೇ ಖ್ಯಾತಿ ಪಡೆದಿದೆ. ಈ ಜೋಡಿ ಮುಂದಿನ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈ ಸುದ್ದಿಯನ್ನು ಕೊಹ್ಲಿ ಬಹಿರಂಗಗೊಳಿಸಿದ್ದೇ ತಡ, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂತು. ಈ ವೇಳೆ ತೈಮೂರ್​ ಕೂಡ ನೆಟ್ಟಿಗರ ಟಾರ್ಗೆಟ್​ ಆಗಿದ್ದು, ಇವನ ಮೇಲೆ ಬಗೆ ಬಗೆಯ ಜೋಕ್​ಗಳನ್ನು ಹರಿಬಿಡಲಾಗುತ್ತಿದೆ.

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಮೂರು ವರ್ಷಗಳ ಡೇಟಿಂಗ್​ ಬಳಿಕ, 2017ರಲ್ಲಿ ಇಟಲಿಯಲ್ಲಿ ಮದುವೆಯಾಗಿತ್ತು. ಐಪಿಎಲ್​ನಲ್ಲಿ ಆಡಲು ಕೊಹ್ಲಿ ಯುಎಇಗೆ ತೆರಳಿದ್ದರೆ, ಅನುಷ್ಕಾ ಶರ್ಮ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. ಸೆ,19 ರಿಂದ ನ.10 ರವರೆಗೆ 13ನೇ ಆವೃತ್ತಿಯ ಐಪಿಎಲ್​ ಟೂರ್ನಿ ಯುಎಇಯ ಶಾರ್ಜಾ, ದುಬೈ ಹಾಗೂ ಅಬುಧಾಬಿಯಲ್ಲಿ ನಡೆಯಲಿದೆ.