ನ್ಯೂಸೌತ್ ವೇಲ್ಸ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಆಗಿ ಕಣಕ್ಕಿಳಿಯುತ್ತಿದ್ದ ಇವರು, ಎದುರಾಳಿ ಬ್ಯಾಟರ್ಗಳಲ್ಲಿ ನಡುಕ ಹುಟ್ಟಿಸುತ್ತಿದ್ದರು. ವಿಶ್ವದ ನಂಬರ್ ಒನ್ ಬೌಲರ್ ಎಂದೇ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿದ್ದ ಈತ ಅಂದಿನ ಕಾಲದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ರನ್ನು ಬಹಳ ಕಾಡಿದ್ದರು. ವೀರು ಅವರಿಗೆ ಹೆಚ್ಚು ರನ್ ಕಲೆಹಾಕದಂತೆ ತಮ್ಮ ಬೌಲಿಂಗ್ನಿಂದ ಕಟ್ಟುಹಾಕುತ್ತಿದ್ದರು. 2008ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಬೌಲರ್ ಒಂದು ಬಲವಾದ ಕಾರಣದಿಂದ ಕ್ರಿಕೆಟ್ಗೆ ಗುಡ್ಬೈ ತಿಳಿಸಿ ಇಂದು ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದ್ದೇ ಆದರೂ ಒಪ್ಪಿಕೊಳ್ಳುವ ಸಂಗತಿ. ಅಸಲಿಗೆ ಇವರು ಬೇರಾರೂ ಅಲ್ಲ ಅವರೇ ನಾಥನ್ ಬ್ರಾಕೆನ್ (Manager).
ಎಲ್ಲಾ ಫಾರ್ಮೆಟ್ನಿಂದ ನಿವೃತ್ತಿ
ಅಂದು ಆಸ್ಟ್ರೇಲಿಯಾ ತಂಡಕ್ಕೆ ಅದ್ಭುತ ಶಕ್ತಿಯಾಗಿದ್ದ ನಾಥನ್ ಬ್ರಾಕೆನ್ 2001ರಿಂದ 2009 ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಂಗರೂ ಪಡೆ ಪ್ರತಿನಿಧಿಸಿದರು. 2003 ಮತ್ತು 2007ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಗೆಲುವಿನ ಭಾಗವಾಗಿ ನಾಥನ್ ಮಿಂಚಿದ್ದರು. ಎಡಗೈ ವೇಗಿ ಆಗಿ ಮೈದಾನಕ್ಕೆ ಬ್ರಾಕೆನ್ ಅವರು ಎಂಟ್ರಿ ಕೊಡುತ್ತಿದ್ದರೆ ಕ್ರೀಸ್ನಲ್ಲಿದ್ದ ಎದುರಾಳಿ ಬ್ಯಾಟರ್ಗಳು ಒಂದು ನಿಮಿಷ ಹೇಗೆ ರನ್ ಕಲೆ ಹಾಕೋದು ಎಂದು ಚಿಂತಿಸುತ್ತಿದ್ದರು. ದೀರ್ಘ ಮೊಣಕಾಲಿನ ಸಮಸ್ಯೆಯ ಕಾರಣ ಬ್ರಾಕನ್ 2011ರ ಜನವರಿಯಲ್ಲಿ ಕ್ರಿಕೆಟ್‌ನ ಎಲ್ಲಾ ಫಾರ್ಮೆಟ್ನಿಂದ ನಿವೃತ್ತಿ ಘೋಷಿಸಿದರು.
ಅಕೌಂಟ್ ಮ್ಯಾನೇಜರ್ ಆಗಿ ಕೆಲಸ
8 ವರ್ಷದ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ನಾಥನ್, 116 ಏಕದಿನ, 19 ಟಿ20 ಮತ್ತು 5 ಟೆಸ್ಟ್ ಪಂದ್ಯಗಳಲ್ಲಿ ಆಸೀಸ್ ಪಡೆಯನ್ನು ಪ್ರತಿನಿಧಿಸಿದ್ದು, ಒಟ್ಟು 205 ವಿಕೆಟ್ಗಳು ಪಡೆದುಕೊಂಡಿದ್ದಾರೆ. ವರದಿಗಳ ಪ್ರಕಾರ, 2011ರಲ್ಲಿ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬ್ರಾಕನ್ರನ್ನು 1.3 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದ್ರೆ, ಅವರು ತಮ್ಮ ಮೊಣಕಾಲಿನ ಸಮಸ್ಯೆಯಿಂದ ಆಡಲು ಇಚ್ಛಿಸದೆ, ದೊಡ್ಡ ಆಫರ್ ಅನ್ನು ತಿರಸ್ಕರಿಸಿದರು. ಸದ್ಯ ಕ್ರಿಕೆಟ್ ಜಗತ್ತಿನಿಂದ ಬಹಳ ದೂರು ಉಳಿದಿರುವ ಬ್ರಾಕನ್, ಪ್ರಸ್ತುತ ನ್ಯೂ ಸೌತ್ ವೇಲ್ಸ್‌ನ ಫುಲ್ಟನ್ ಹೊಗನ್ ಎಂಬ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತ, ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ,(ಏಜೆನ್ಸೀಸ್).