ಕ್ರೀಡೆ

ರೋಹಿತ್​ ಪುತ್ರಿ ಸಮೈರಾ ಈ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿ: ಸ್ಕೂಲ್​ ಫೀಸ್​ ಬಗ್ಗೆ ತಿಳಿದ್ರೆ ಹುಬ್ಬೇರೋದು ಖಚಿತ! Rohit Sharma

Rohit Sharma : ರೋಹಿತ್ ಶರ್ಮ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ. ಅಷ್ಟೇ ಅಲ್ಲ ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕ ಕೂಡ. ಹೀಗಾಗಿ ಜನರಿಗೆ ರೋಹಿತ್​ ಹಾಗೂ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿಯೇ ಇರುತ್ತದೆ. ರೋಹಿತ್​ ಪತ್ನಿ ರಿತಿಕಾ ಸಾಜ್ದೇಹ್​, ಕಳೆದ ವರ್ಷವಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದರು. ರೋಹಿತ್​ ಗಂಡು ಮಗುವಿನ ತಂದೆಯಾಗಿದ್ದು, ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೂಡ ಸಂಭ್ರಮಿಸಿದರು.

ಅಂದಹಾಗೆ, ರೋಹಿತ್ ಮತ್ತು ರಿತಿಕಾ 2015ರಲ್ಲಿ ವಿವಾಹವಾದರು. ರೋಹಿತ್ ಅವರ ಪತ್ನಿ ಮತ್ತು ಮಗಳು ಸಮೈರಾ ಆಗಾಗ ಟೀಮ್​ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿರುತ್ತಾರೆ. ಇನ್ನು ಮಗಳು ಸಮೈರಾ ಅಂದ್ರೆ ರೋಹಿತ್​ಗೆ ತುಂಬಾ ಇಷ್ಟ. ಸಮಯ ಸಿಕ್ಕಾಗಲೆಲ್ಲ ಆಕೆಯ ಜತೆ ಮಗುವಿನಂತೆ ಆಡುತ್ತಿರುತ್ತಾರೆ. ಇಬ್ಬರ ನಡುವಿನ ಪ್ರೀತಿಗೆ ಸಂಬಂಧಿಸಿದ ವಿಡಿಯೋಗಳು ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಅಭಿಮಾನಿಗಳಿಂದ ರೋಹಿತ್​ ಪಡೆಯುವ ಅದೇ ಪ್ರೀತಿಯನ್ನು ಅವರ ಮಗಳು ಸಮೈರಾ ಸಹ ಸ್ವೀಕರಿಸುತ್ತಾರೆ.

ರೋಹಿತ್ ಶರ್ಮ ಅವರ ಮಗಳು ಸಮೈರಾಗೆ ಈಗ 6 ವರ್ಷ. ಆಕೆಯ ಶಾಲೆಯ ವಿವರಗಳು ಈಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಆಕೆ ಯಾವ ಶಾಲೆಯಲ್ಲಿ ಓದುತ್ತಿದ್ದಾಳೆ? ರೋಹಿತ್ ಅಲ್ಲಿ ಎಷ್ಟು ಶುಲ್ಕ ಪಾವತಿಸುತ್ತಿದ್ದಾರೆ? ಈ ಕುರಿತಾದ ಮಾಹಿತಿ ಇತ್ತೀಚೆಗಷ್ಟೇ ಹೊರಬಂದಿದೆ.

ಅಂದಹಾಗೆ, ರೋಹಿತ್ ಶರ್ಮ ತಮ್ಮ ಮಗಳಿಗೆ ಭಾರತದ ಅತ್ಯುತ್ತಮ ಶಾಲೆಗಳಲ್ಲಿ ಒಂದಾದ ಮುಂಬೈನ ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಅಂಬಾನಿ ಕುಟುಂಬ 2003ರಲ್ಲಿ ಈ ಶಾಲೆಯನ್ನು ಪ್ರಾರಂಭಿಸಿತು. ಈ ಶಾಲೆಯು LKG ಯಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ಒದಗಿಸುತ್ತದೆ.

2023-24ನೇ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ಮಕ್ಕಳಿಗೆ ಇಲ್ಲಿ ವಾರ್ಷಿಕ ಬೋಧನಾ ಶುಲ್ಕ 14 ಲಕ್ಷ ರೂಪಾಯಿ. 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು 20 ಲಕ್ಷ ರೂಪಾಯಿ. ಈ ಮೊತ್ತವು ಸಮವಸ್ತ್ರ, ಅವಧಿ ಶುಲ್ಕ, ಪುಸ್ತಕಗಳು ಮತ್ತು ಮಕ್ಕಳ ಸಾರಿಗೆಯನ್ನು ಒಳಗೊಂಡಿದೆ. ಭಾರತದ ಅನೇಕ ಸೆಲೆಬ್ರಿಟಿಗಳ ಮಕ್ಕಳು ರಿಲಯನ್ಸ್ ಗ್ರೂಪ್‌ನ ಈ ಶಾಲೆಯಲ್ಲಿ ಓದುತ್ತಿದ್ದಾರೆ. (ಏಜೆನ್ಸೀಸ್​)